ಕಾಮನ್‌ವೆಲ್ತ್‌ ಗೇಮ್ಸ್‌ 2022: ಕುಸ್ತಿಯಲ್ಲಿ ಭಾರತಕ್ಕೆ 3 ಚಿನ್ನ, 1 ಬೆಳ್ಳಿ, ಪದಕ ಪಟ್ಟಿಯಲ್ಲಿ 5ನೇ ಸ್ಥಾನ

masthmagaa.com:

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೀತಿರೋ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತೀಯ ಕುಸ್ತಿ ಪಟುಗಳು ಪದಕ ಪಟ್ಟಿಯಲ್ಲಿ ದೇಶವನ್ನ ಒಂದು ಹೆಜ್ಜೆ ಮುಂದೆ ಇರಿಸಿದ್ದಾರೆ. ಕುಸ್ತಿ ಅಖಾಡದಲ್ಲಿ ಭಾರತಕ್ಕೆ 3 ಚಿನ್ನ ಹಾಗೂ 1 ಬೆಳ್ಳಿ ಪದಕ ಲಭಿಸಿದೆ. 65 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಬಜರಂಗ್‌ ಪೂನಿಯಾ, 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್‌ ಹಾಗೂ 86 ಕೆಜಿ ವಿಭಾಗದಲ್ಲಿ ದೀಪಕ್‌ ಪೂನಿಯಾ ಚಿನ್ನ ಗೆದ್ದಿದ್ದಾರೆ. 57 ಕೆಜಿ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಅನ್ಶು ಮಲಿಕ್‌ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ 8ನೇ ದಿನದಂದು ಭಾರತ ಒಟ್ಟು 6 ಪದಕಗಳನ್ನ ಬಾಚಿಕೊಂಡಿದೆ. ಟೋಟಲ್‌ ನೋಡಿದ್ರೆ 9 ಚಿನ್ನ, 8 ಬೆಳ್ಳಿ ಹಾಗೂ 9 ಕಂಚಿನೊಂದಿಗೆ 26 ಪದಕಗಳನ್ನ ತನ್ನದಾಗಿಸಿಕೊಂಡು ಪದಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿ ಭಾರತವಿದೆ. ಇತ್ತ ವರ್ಲ್ಡ್‌ ಅಂಡರ್‌-20 ಅಥ್ಲೆಟಿಕ್ಸ್‌ನಲ್ಲಿ ಭಾರತದ ರೂಪಲ್‌ ಚೌಧರಿ 2 ಪದಕಗಳನ್ನ ಗೆಲ್ಲೋ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ರೂಪಲ್‌ ಇದ್ದ 4*100 ರಿಲೆ ತಂಡ ಬೆಳ್ಳಿ ಪದಕ ಜಯಿಸಿತ್ತು. ಹಾಗೂ ವೈಯಕ್ತಿಕ 400 ಮೀಟರ್‌ ಓಟದಲ್ಲಿ ಕಂಚಿನ ಪದಕವನ್ನ ಗೆದಿದ್ರು, ಇದರೊಂದಿಗೆ ಈ ಕ್ರೀಡಾಕೂಟದ ಇತಿಹಾಸದಲ್ಲಿ 2 ಪದಕಗಳನ್ನ ಗೆದ್ದ ಮೊದಲ ಭಾರತದ ಅಥ್ಲೀಟ್‌ ಅನ್ನೊ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

-masthmagaa.com

Contact Us for Advertisement

Leave a Reply