ಪಾಕಿಸ್ತಾನ, ಚೀನಾಗಳಿಗೆ ಮತ್ತೊಮ್ಮೆ ಎಸ್‌ ಜೈಶಂಕರ್‌ ಚಾರ್ಜ್!

masthmagaa.com:

ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಮತ್ತೆ ಚೀನಾ, ಪಾಕ್‌ಗಳ ಬಗ್ಗೆ ಮಾತನಾಡಿದ್ದಾರೆ. ಕಾಶ್ಮೀರ ಸಮಸ್ಯೆಯನ್ನ ಭಾರತ ವಿಶ್ವಸಂಸ್ಥೆ ಬಳಿ ತಗೊಂಡ್‌ ಹೋಯ್ತು. ಆ ರೀತಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ, ಅಲ್ಲಿವರೆಗೆ ಅಗ್ರೆಸಿವ್‌ ಆಗಿದ್ದ ಪಾಕಿಸ್ತಾನ, ಜಗತ್ತಿನ ಮುಂದೆ ಕಾಶ್ಮೀರದ ಶಾಂತಿಯುತ ಸೇರ್ಪಡೆ ಬಾವುಟ ಹಿಡೀತು. ಕಾಶ್ಮೀರವನ್ನೇ ಪಾಕಿಸ್ತಾನಕ್ಕೆ ಸೇರಿಸ್ಕೊಬೇಕು ಅನ್ನೋ ಲೆವೆಲ್‌ಗೆ ಹೋಯ್ತು ಅಂದಿದ್ದಾರೆ. ಆ ಮೂಲಕ ಬಹುಪಕ್ಷೀಯತೆಗೆ ಮೊದಲು ನಮ್ಮ ದೇಶದ ಹಿತಾಸಕ್ತಿ.. ನಮ್ಮ ನ್ಯಾಷನಲ್‌ ಇಂಟ್ರಸ್ಟ್‌ಗಳು ಮುಖ್ಯ ಆಗತ್ತೆ ಅಂದಿದ್ದಾರೆ. ಅಲ್ಲದೆ ಈಗ ಜಾಗತಿಕವಾಗಿ ನಡೀತಿರೋ ಸಂಘರ್ಷಗಳಿಗೆ ಬಹುಪಕ್ಷೀಯತೆ ಅಥ್ವಾ ಮಲ್ಟಿಲ್ಯಾಟರಲಿಸ್ಮ್‌ ಪರಿಹಾರ ಕೊಡೋಕೆ ಆಗಿಲ್ಲ ಅಂದಿದ್ದಾರೆ. ಇನ್ನೊಂದು ಕಡೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆಯನ್ನ ವಿರೋಧಿಸೋರು ವೆಸ್ಟ್‌ನಲ್ಲಿಲ್ಲ. ನಮ್ಮ ಪಕ್ಕದಲ್ಲೇ ಇದಾರೆ ಅಂತ ಚೀನಾಗೆ ಟಾಂಗ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply