ಅರುಣಾಚಲ ಪ್ರದೇಶದ ಮೇಲಿನ ಚೀನಾ ಹೇಳಿಕೆ ಹಾಸ್ಯಾಸ್ಪದ: ಜೈಶಂಕರ್‌

masthmagaa.com:

ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅರುಣಾಚಲ ಪ್ರದೇಶದ ವಿಚಾರವಾಗಿ ಚೀನಾ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಚೀನಾ ಅರುಣಾಚಲ ಪ್ರದೇಶದ ಮೇಲೆ ಅಧಿಕಾರ ಚಲಾಯ್ಸೋಕೆ ಬರೋದು ಹಾಸ್ಯಾಸ್ಪದ ಅಂತೇಳಿದ್ದಾರೆ. ಅಲ್ಲದೆ, ʻಇದೇನು ಹೊಸ ಸಮಸ್ಯೆಯಲ್ಲ. ಚೀನಾ ಹೀಗೆ ಹೇಳ್ತಾನೇ ಇರುತ್ತೆ. ಆದ್ರೆ ಇದು ಕಂಪ್ಲೀಟ್ ಹಾಸ್ಯಾಸ್ಪದ. ಅರುಣಾಚಲ ಪ್ರದೇಶ ಭಾರತದ ನೈಸರ್ಗಿಕ ಭಾಗ. ಈ ಬಗ್ಗೆ ನಮಗೆ ಕ್ಲಾರಿಟಿ ಇದೆ. ಚೀನಾದ ಆಧಾರರಹಿತ ವಾದದಿಂದ ಏನೂ ಉಪಯೋಗ ಆಗಲ್ಲ. ಪಿಎಂ ಮೋದಿ ಭೇಟಿ ಬಗ್ಗೆ ಚೀನಾದ ಕಮೆಂಟ್‌ಗಳನ್ನ ನಾವು ರಿಜೆಕ್ಟ್‌ ಮಾಡ್ತೇವೆ. ಭಾರತದ ನಾಯಕರು ಅರುಣಾಚಲ ಪ್ರದೇಶಕ್ಕೆ ಭೇಟಿ ಕೊಡ್ತಾನೆ ಇದಾರೆ. ಎಲ್ಲಾ ರಾಜ್ಯಗಳ ರೀತಿ ಆ ರಾಜ್ಯಕ್ಕೂ ಭೇಟಿ ಕೊಡ್ತಾರೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply