ಸೌದಿ ರಾಜನಿಗೆ ಕರೆ ಮಾಡಿದ್ಯಾಕೆ ಬೈಡೆನ್?

masthmagaa.com:

ಜಮಾಲ್ ಕಶೋಗಿ ಹತ್ಯೆ ಸಂಬಂಧ ಸಿಐಎ ಸಿದ್ಧಪಡಿಸಿರುವ ಗುಪ್ತವರದಿ ಬಹಿರಂಗಪಡಿಸಲು ಸಿದ್ಧತೆ ನಡೆಸಲಾಗ್ತಾ ಇದೆ. ಆದ್ರೆ ಈ ವರದಿಯಲ್ಲಿ ಕಶೋಗಿ ಹತ್ಯೆಗೆ ಸೌದಿ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್​ರನ್ನು ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೌದಿ ರಾಜ ಸಲ್ಮಾನ್​​ಗೆ ಕರೆ ಮಾಡಿ ಮಾತನಾಡಿದ್ದಾರೆ. ಅಧ್ಯಕ್ಷರಾದ ಬಳಿಕ ಇದು ಮೊದಲ ಮಾತುಕತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ವೈಟ್ ಹೌಸ್​​, ಭದ್ರತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಅಂತ ಹೇಳಿದೆ.

ಆದ್ರೆ ಜಮಾಲ್ ಕಶೋಗಿ ಹತ್ಯೆ ಸಂಬಂಧ ವರದಿ ಬಿಡುಗಡೆಯಾಗುತ್ತಿರುವ ಹೊತ್ತಲ್ಲಿ ಅದ್ರಲ್ಲೂ ಆ ವರದಿಯಲ್ಲಿ ಹತ್ಯೆಗೆ ಮೊಹ್ಮದ್ ಬಿನ್ ಸಲ್ಮಾನ್ ಹೊಣೆ ಅನ್ನೋ ಅಂಶ ಇದೆ ಅಂತ ಸುದ್ದಿಯಾಗುತ್ತಿರುವಾಗ ಈ ಬಗ್ಗೆ ಮಾತನಾಡದೇ ಇರ್ತಾರಾ.. ಖಂಡಿತ ಈ ಬಗ್ಗೆಯೂ ಮಾತನಾಡಿರ್ತಾರೆ ಅಂತ ಹೇಳಲಾಗ್ತಿದೆ. ಒಂದು ವೇಳೆ ವರದಿಯಲ್ಲಿ ಮೊಹ್ಮದ್ ಬಿನ್ ಸಲ್ಮಾನ್​ರನ್ನೇ ಕಶೋಗಿ ಹತ್ಯೆಗೆ ಹೊಣೆ ಮಾಡಿದ್ರೆ ಅಮೆರಿಕ ಮತ್ತು ಸೌದಿ ಅರೇಬಿಯಾ ಸಂಬಂಧದಲ್ಲಿ ಬಿರುಕು ಮೂಡಲಿದೆ.

-masthmagaa.com

Contact Us for Advertisement

Leave a Reply