ಆರ್ಟಿಕಲ್‌ 311 ಅಡಿಯಲ್ಲಿ ಜಮ್ಮು & ಕಾಶ್ಮೀರದ ಶಿಕ್ಷಕ ವಜಾ!

masthmagaa.com:

ದೇಶ ವಿರೋಧಿ ಚಟುವಟಿಕೆಯಲ್ಲಿ ಇನ್ವಾಲ್ವ್‌ ಆಗಿದ್ದ ಆರೋಪದ ಮೇಲೆ ಇದೀಗ ಜಮ್ಮು & ಕಾಶ್ಮೀರದಲ್ಲಿ ಶಿಕ್ಷಕನೊಬ್ಬನನ್ನ ವಜಾಗೊಳಿಸಲಾಗಿದೆ. ಆರ್ಟಿಕಲ್‌ 311 ಅಡಿಯಲ್ಲಿ, ಜಮ್ಮು & ಕಾಶ್ಮೀರದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಮನ್ಸೂರ್‌ ಅಹ್ಮದ್‌ ಲಾವೆ ಅನ್ನೋನನ್ನ ಮಾರ್ಚ್‌ 15 ರಂದು ಡಿಸ್‌ಮಿಸ್‌ ಮಾಡಿರೋದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಆರ್ಟಿಕಲ್‌ 311ರ ಅಡಿಯಲ್ಲಿ ಒಟ್ಟು 56 ಸರ್ಕಾರಿ ಅಧಿಕಾರಿಗಳನ್ನ ಕೆಲಸದಿಂದ ವಜಾಗೊಳಿಸಲಾಗಿದೆ. ಅಂದ್ಹಾಗೆ ಈ ಆರ್ಟಿಕಲ್‌ 311 ಅಡಿಯಲ್ಲಿ ಸರ್ಕಾರಿ ಸೇವೆಯ ಲಾಭ ಪಡೆಯೋ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರೋರನ್ನ ವಜಾಗೊಳಿಸಲಾಗುತ್ತೆ.

-masthmagaa.com

Contact Us for Advertisement

Leave a Reply