ಉಗ್ರರನ್ನು ಹೊಡೆದುರುಳಿಸಿ ವೀರಯೋಧರ ಸಂಭ್ರಮ: ವಿಡಿಯೋ ನೋಡಿ…

ಜಮ್ಮು ಕಾಶ್ಮೀರದ ರಾಮ್ ಬನ್ ನಲ್ಲಿ ಇವತ್ತು ಮೂವರು ಉಗ್ರರನ್ನು ನಮ್ಮ ಹೆಮ್ಮೆಯ ಯೋಧರು ಹೊಡೆದುರುಳಿಸಿದ್ದಾರೆ. ಇದೇ ಖುಷಿಯಲ್ಲಿ ಯೋಧರು ಸಂಭ್ರಮಾಚರಣೆ ಮಾಡಿದ್ದಾರೆ. ಅಲ್ಲದೆ ಈ ವೇಳೆ ಪಾಕಿಸ್ತಾನ್ ಮುರ್ದಾಬಾದ್..ಹಿಂದೂಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಈ ಸಂಭ್ರಮಾಚರಣೆಯ ವಿಡಿಯೋ ಲಭ್ಯವಾಗಿದ್ದು, ಅದರಲ್ಲಿ ಸುತ್ತಲೂ ನಾಗರಿಕರು ನಿಂತು ನೋಡುತ್ತಿದ್ದಾರೆ.

ಇಂದು ಬೆಳಗ್ಗೆ ರಾಮಬನದ ಬಟೋಟೆಯಲ್ಲಿ ಇಬ್ಬರಿಂದ ಮೂವರು ಉಗ್ರರು ಪ್ರಯಾಣಿಕರಿದ್ದ ಬಸ್ ತಡೆಯಲು ಯತ್ನಿಸಿದ್ರು. ಸೇನಾ ಸಮವಸ್ತ್ರದಲ್ಲಿದ್ದ ಉಗ್ರರನ್ನು ಕಂಡ ಬಸ್ ಡ್ರೈವರ್ ಬಸ್ ನಿಲ್ಲಿಸದೇ ವೇಗ ಹೆಚ್ಚಿಸಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಆ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದ್ರೆ ಈಗ ಮನೆಯೊಂದಕ್ಕೆ ನುಗ್ಗಿರುವ ಉಗ್ರರು ಮನೆಯವರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಮನೆಯನ್ನು ಸುತ್ತುವರಿದು ಕಾರ್ಯಾಚರಣೆ ಆರಂಭಿಸಿದ ಯೋಧರು ಮೂವರೂ ಉಗ್ರನ್ನು ಹೊಡೆದು ಹಾಕಿದ್ದರು. ಮನೆಯಲ್ಲಿ ಒತ್ತೆಯಾಳಾಗಿದ್ದವರನ್ನು ರಕ್ಷಿಸಿದ್ದರು. ಆದ್ರೆ ಈ ಕಾರ್ಯಾಚರಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದರು.

Contact Us for Advertisement

Leave a Reply