ಜಪಾನ್‌ ಕಂಪನ! ಇದುವರೆಗೆ 62 ಮಂದಿ ಸಾವು, ಹಲವರಿಗೆ ಗಾಯ!

masthmagaa.com:

ಜಪಾನ್‌ನಲ್ಲಿ ವರ್ಷದ ಆರಂಭದಲ್ಲೇ ನಡೆದ ಸರಣಿ ಭೂಕಂಪದಲ್ಲಿ ಹಲವಾರು ಮಂದಿ ಪ್ರಾಣ ಕಳೆದ್ಕೊಂಡಿದ್ದಾರೆ. ಈ ಭೀಕರ ಭೂಕಂಪದಲ್ಲಿ ಇದುವರೆಗೆ 62 ಮಂದಿ ಮೃತಪಟ್ಟಿರೋದು ವರದಿಯಾಗಿದೆ. ಜೊತೆಗೆ 300ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು, ಈ ಪೈಕಿ 20 ಜನರ ಕಂಡೀಷನ್‌ ಸೀರಿಯಸ್‌ ಆಗಿದೆ ಅಂತ ಅಲ್ಲಿನ ಅಧಿಕಾರಿಯೊಬ್ರು ಮಾಹಿತಿ ನೀಡಿದ್ದಾರೆ. ಇಷ್ಟು ಮಾತ್ರವಲ್ದೇ, ಸಾವಿರಾರು ಮನೆಗಳು ಭೂಕಂಪದಲ್ಲಿ ಸಿಲುಕಿ ನಾಶವಾಗಿವೆ. ಕೆಲ ಏರಿಯಾಗಳಲ್ಲಿ ಇನ್ನೂ ಕೂಡ ಸರಿಯಾಗಿ ನೀರು, ವಿದ್ಯುತ್‌ ಪೂರೈಕೆ, ಸೆಲ್‌ ಫೋನ್‌ ಸೇವೆಗಳಿಲ್ದೇ ಜನ ಭೂಕಂಪದ ಆಫ್ಟರ್‌ ಎಫೆಕ್ಟ್ಸ್‌ ಎದುರಿಸ್ತಿದ್ದಾರೆ. ಜಪಾನ್‌ನ ಸಾವಿರಾರು ಸೇನಾ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್‌ ಅಧಿಕಾರಿಗಳು ನೋಟೋ ಪರ್ಯಾಯ ದ್ವೀಪದಂತಹ ಹೆಚ್ಚು ಪ್ರಮಾಣದಲ್ಲಿ ಹಾನಿಗೊಳಗಾದ ಏರಿಯಾಗಳಿಗೆ ದೌಡಾಯಿಸಿದ್ದಾರೆ. ಅಲ್ಲಿ ಸಿಲುಕಿಕೊಂಡಿರೋರನ್ನ ರಕ್ಷಣೆ ಮಾಡೋಕೆ ಸ್ಟಾರ್ಟ್‌ ಮಾಡಿದ್ದಾರೆ. ಇನ್ನು ಈ ಘಟನೆಯಲ್ಲಿ ಮೃತಪಟ್ಟಿರೋರ ಸಂಖ್ಯೆ ಜಾಸ್ತಿಯಾಗ್ತಲೇ ಇದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply