ತಮ್ಮ ಮಗನನ್ನೇ ಕೆಲಸದಿಂದ ತೆಗದು ಹಾಕಿದ ಜಪಾನ್‌ ಪ್ರಧಾನಿ ಕಿಶಿದಾ! ಕಾರಣವೇನು?

masthmagaa.com:

ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ ಅವ್ರು ಸೆಕ್ರೆಟರಿ ಸ್ಥಾನದಿಂದ ತಮ್ಮ ಮಗನನ್ನ ತೆಗೆದು ಹಾಕೋದಾಗಿ ಹೇಳಿದ್ದಾರೆ. ಕಳೆದ ವರ್ಷ Shotaro ಕಿಶಿದಾ ಅವ್ರು ಅಧಿಕೃತ ನಿವಾಸದಲ್ಲಿ ಕೆಟ್ಟದಾಗಿ ನಡೆದುಕೊಂಡಿದ್ರು ಅಂತ ಆರೋಪಿಸಲಾಗಿತ್ತು. ಈ ವಿಚಾರವಾಗಿ ವಿರೋಧಪಕ್ಷಗಳಿಂದ ಹಲವು ಟೀಕೆಗಳನ್ನ ಫೇಸ್‌ ಮಾಡಿದ್ದ ಕಿಶಿದಾ ಅವ್ರು ಇದೀಗ ತಮ್ಮ ಮಗನನ್ನ ವಜಾಗೊಳಿಸಲು ನಿರ್ಧರಿಸಿರೋದಾಗಿ ಹೇಳಿದ್ದಾರೆ. ಕಳೆದ ವರ್ಷ ಸಾರ್ವಜನಿಕ ಸ್ಥಳದಲ್ಲಿ ನನ್ನ ರಾಜಕೀಯ ಕಾರ್ಯದರ್ಶಿಯಾಗಿರುವ Shotaro ಕಿಶಿದಾ ಅವ್ರ ನಡುವಳಿಕೆ ಸೂಕ್ತವಾಗಿರಲಿಲ್ಲ. ಹೀಗಾಗಿ ನಾವು ಅವ್ರನ್ನ ಕೆಲಸದಿಂದ ತೆಗೆದು ಹಾಕಲು ಡಿಸೈಡ್‌ ಮಾಡಿದಿವಿ ಅಂತ ಕಿಶಿದಾ ತಿಳಿಸಿದ್ದಾರೆ. ಇನ್ನು ಜೂನ್ 1 ರಂದು Shotaro ಅವ್ರು ರಾಜಿನಾಮೆ ನೀಡಲಿದ್ದಾರೆ.

-masthmagaa.com

Contact Us for Advertisement

Leave a Reply