ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ಜಪಾನ್‌ನ SLIM ಲ್ಯಾಂಡರ್!

masthmagaa.com:

ಶುಕ್ರವಾರ ಹುಣ್ಣಿಮೆನೂ ಇರ್ಲಿಲ್ಲ ಅಮಾವಾಸೆನೂ ಇರ್ಲಿಲ್ಲ. ಆದ್ರೂ ಚಂದ್ರ ಮಾತ್ರ ಸದ್ದು ಮಾಡ್ತಾನೆ ಇದ್ದ. ಒಂದು ನಾಸಾದ ಆರ್ಬಿಟರ್‌ ವಿಕ್ರಮ ಲ್ಯಾಂಡರ್‌ಗೆ ಲೇಸರ್‌ ಬೀಮ್‌ ಟ್ರಾನ್ಸ್‌ಮಿಟ್‌ ಮಾಡಿ ವಾಪಸ್‌ ಸಿಗ್ನಲ್‌ ಪಡೆದಿದ್ದಕ್ಕೆ. ಒಬ್ಬಂಟಿಯಾಗಿರೋ ವಿಕ್ರಮ್‌ಗೆ ಹೆಚ್ಚು ಕಮ್ಮಿ ಹಾಯ್‌ ಹೇಳ್ದಂಗಿತ್ತು ಅದು. ಇನ್ನೊಂದು ಅದ್ಬುತ ವಿಚಾರ ಏನಂದ್ರೆ, ನಮ್ಮ ಮಿತ್ರ ರಾಷ್ಟ್ರ ಜಪಾನ್‌ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿ ಇತಿಹಾಸ ಸೃಷ್ಟಿಸಿದೆ. ಆ ಮೂಲಕ ಹಳ್ಳದ ದಾರಿ ಹಿಡಿದಿದ್ದ ತನ್ನ ಸ್ಪೇಸ್‌ ಪ್ರೋಗ್ರಾಮ್‌ಗೆ ಜಪಾನ್‌ ಮತ್ತೆ ಶಕ್ತಿ ನೀಡಿ ದಡಕ್ಕೆ ಎಳ್ಕೊಂಡ್‌ ಬಂದಿದೆ ಅಂತಾನೇ ಹೇಳ್ಬೋದು. ಜಪಾನ್‌ನ JAXA ನಿರ್ಮಿಸಿದ್ದ Smart Lander for Investigating Moon ಅಥ್ವಾ SLIM ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ. ಜಪಾನ್‌ ಕಾಲಮಾನದ ಪ್ರಕಾರ ಮಧ್ಯರಾತ್ರಿ 12:20ಕ್ಕೆ ಈ ಲ್ಯಾಂಡಿಗ್‌ ಆಗಿದೆ. ಆದ್ರೆ ಒಂದ್‌ ಮಿಸ್ಟೇಕ್‌ ಏನಾಗಿದೆ ಅಂದ್ರೆ, ಚಂದ್ರನ ಮೇಲಿದ್ದ ಕ್ರೇಟರ್‌ ಅಥ್ವಾ ಕುಳಿಯೊಂದ್ರ ಏರಿಯಲ್ಲಿ.. ಸ್ಲೋಪ್‌ನಲ್ಲಿ ಈ ಲ್ಯಾಂಡರ್‌ ಇಳಿದಿದೆ. ಸೋ ಅದ್ರ ಓರಿಯೆಂಟೇಶನ್‌ ನೇರವಾಗಿಲ್ಲ. ಸ್ವಲ್ಪ ಭಾಗಿದೆ.. ಆ ಮೂಲಕ ಲ್ಯಾಂಡರ್‌ನಲ್ಲಿರೋ ಸೌರಫಲಕ ಅಥ್ವಾ ಸೋಲಾರ್‌ ಪ್ಲೇಟ್‌ಗಳಿಗೆ ಸೂರ್ಯನ ಬೆಳಕು ಸರಿಯಾಗಿ ರೀಚ್‌ ಆಗ್ತಿಲ್ಲ. ಇದ್ರಿಂದ ಈ ಲ್ಯಾಂಡರ್‌ ಶಕ್ತಿ ಉತ್ಪಾದನೆ ಮಾಡ್ಕೊಳ್ಳೋಕೆ ಆಗ್ತಿಲ್ಲ. ಸೋ ಸದ್ಯ ಇದನ್ನ ಷಟ್‌ ಡೌನ್‌ ಮಾಡಲಾಗಿದೆ. ಆದ್ರೆ ಇದ್ರಲ್ಲಿ ಒಂದು ಸಣ್ಣ ಬ್ಯಾಟರಿ ಇದೆ. ಕೆಲವು ಗಂಟೆಗಳವರೆಗೆ ಅದರ ಡಿವೈಸ್‌ಗಳು ಕೆಲಸ ಮಾಡುವಂತೆ ಮಾಡೋಕೆ. ಇದ್ರ ಸಹಾಯದಿಂದ ಲ್ಯಾಂಡ್‌ ಮಾಡ್ಬೇಕಾದ್ರೆ ತೆಗೆದ ಫೋಟೋಗಳನ್ನ SLIM ಭೂಮಿಗೆ ಕಳಿಸಲಿದೆ ಅಂತ ಜಾಕ್ಸಾ ವಿಜ್ಞಾನಿಗಳು ಹೇಳಿದ್ದಾರೆ. ಒಟ್ಟಿನಲ್ಲಿ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ಐದನೇ ದೇಶವಾಗಿ ಜಪಾನ್‌ ಹೊರಹೊಮ್ಮಿದೆ. ಮುಂದೆ ಇಸ್ರೋ ಹಾಗೂ ಜಾಕ್ಸಾ ಒಟ್ಟಾಗಿ Lupex ಮಿಷನ್‌ ಮಾಡೋಕೆ ಹೊರ್ಟಿರೋದ್ರಿಂದ ಉಭಯ ದೇಶಗಳ ಎಕ್ಸ್‌ಪೀರಿಯನ್ಸ್‌ ಕೌಂಟ್‌ ಆಗ್ಲಿದೆ. ಇನ್ನು ಜಪಾನ್‌ನಂತ ಅತ್ಯದ್ಬುತ ಟೆಕ್ನಾಲಜಿ ಇರೋ ದೇಶವೇ 100% ಪರ್ಫೆಕ್ಟಾಗಿ ಮೂನ್‌ ಲ್ಯಾಂಡಿಂಗ್‌ ಮಾಡೋಕೆ ಕಷ್ಟ ಪಟ್ಟಿರೋದ್ರಿಂದ, ನಮ್ಮ ಇಸ್ರೋ ಮಾಡಿರೋ ಕೆಲಸ ಎಷ್ಟು ಸಾಹಸಮಯ, ಎಂತಾ ಸಾಧನೆ ಅನ್ನೋದನ್ನ ನಾವು ಗಮನಿಸಬೇಕು.

-masthmagaa.com

Contact Us for Advertisement

Leave a Reply