ನಾಸಾದ ಆರ್ಟೆಮಿಸ್‌ ಯೋಜನೆಯ ಭಾಗವಾದ ಜೆಫ್‌ ಬೆಜೋಸ್‌ರ ಬ್ಲೂ ಆರಿಜಿನ್‌ ಬಾಹ್ಯಾಕಾಶ ಕಂಪನಿ!

masthmagaa.com:

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಕಾಂಟ್ರ್ಯಾಕ್ಟ್‌ ಒಂದನ್ನ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಜ್‌ರ ಖಾಸಗಿ ಬಾಹ್ಯಾಕಾಶ ಕಂಪನಿ ಬ್ಲೂ ಒರಿಜಿನ್‌ ತನ್ನದಾಗಿಸಿಕೊಂಡಿದೆ. ನಾಸಾದ ಮುಂದಿನ ಮೂನ್‌ ಮಿಷನ್‌ಗಾಗಿ ಬಾಹ್ಯಾಕಾಶ ನೌಕೆ ನಿರ್ಮಾಣ ಮಾಡಲು ಬ್ಲೂ ಒರಿಜಿನ್‌ ಜೊತೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಅಂತ ನಾಸಾ ಅನೌನ್ಸ್‌ ಮಾಡಿದೆ. ಬ್ಲೂ ಒರಿಜಿನ್‌ ಜೊತೆಗಿನ ಈ ಒಪ್ಪಂದ 3.4 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 27,880 ಕೋಟಿ ರೂಪಾಯಿ ಮೌಲ್ಯವನ್ನ ಹೊಂದಿದೆ ಅಂತ ನಾಸಾದ ಪರಿಶೋಧನಾ ಮುಖ್ಯಸ್ಥ ಜಿಮ್ ಫ್ರೀ ಹೇಳಿದ್ದಾರೆ. ನಾಸಾದ ಆರ್ಟೆಮಿಸ್‌ ಮಿಷನ್‌ ಭಾಗವಾಗಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಲು ನಾಸಾ ಜೊತೆಗಿನ ಈ ಮಿಷನ್‌ನಿಂದ ಹೆಮ್ಮೆಯಿದೆ ಅಂತ ಜೆಫ್‌ ಬೆಜೋಜ್‌ ಹೇಳಿದ್ದಾರೆ. ಅಂದ್ಹಾಗೆ ಇದೇ ಆರ್ಟೆಮಿಸ್‌ ಮಿಷನ್‌ನ ಭಾಗವಾಗಿ ಚಂದ್ರನ ಮೇಲೆ ಗಗನಯಾತ್ರಿಗಳನ್ನ ಇಳಿಸಲು 2021ರಲ್ಲಿ ಎಲಾನ್‌ ಮಸ್ಕ್‌ ಒಡೆತನ ಸ್ಪೇಸ್‌X ಬಾಹ್ಯಾಕಾಶ ಕಂಪನಿ ಜೊತೆಯಲ್ಲಿ ನಾಸಾ ಒಪ್ಪಂದ ಮಾಡಿಕೊಂಡಿತ್ತು. ಆದರೆ ಸ್ಪೇಸ್‌Xನ ಸ್ಟಾರ್‌ಶಿಪ್‌ ವ್ಯವಸ್ಥೆಯನ್ನ ಬಳಸಿಕೊಂಡು ನಡೆಸಲಾಗುವ ಕಾರ್ಯಾಚರಣೆಯನ್ನ ಮುಂದೂಡಲಾಗಿದೆ.

-masthmagaa.com

Contact Us for Advertisement

Leave a Reply