ಜೆಟ್‌ ಇಂಜಿನ್‌ ಜೈಶಂಕರ್‌! ಈ ವರ್ಷ 33 ವಿದೇಶಿ ಪ್ರವಾಸ!

masthmagaa.com:

CoWIN, Covaxin, 5G, ಚಂದ್ರಯಾನ ಸೇರಿದಂತೆ ಹಲವು ಯೋಜನೆಗಳು ವಿಕಸಿತ ಭಾರತದ ಪ್ರಮುಖ ಭಾಗಗಳಾಗಿದ್ದು, ವಿಶ್ವದಲ್ಲಿ ಭಾರತವು ಮುಖ್ಯವಾದ ಜಾಗತಿಕ ನೀತಿಯನ್ನ ರೂಪಿಸಲು ಶ್ರಮಿಸುತ್ತಿದೆ ಅಂತ ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ್ದಾರೆ. ದುಬೈನ ಭಾರತೀಯ ವಿದ್ಯಾರ್ಥಿಗಳ ಜೊತೆ ನಡೆಸಿರೋ ಸಂವಾದದಲ್ಲಿ ಜಗತ್ತಿನಲ್ಲಿ ಭಾರತದ ಉನ್ನತ ಬೆಳವಣಿಗೆ ಕುರಿತು ಮಾತನಾಡಿದ್ದಾರೆ.

ಮೋದಿ ಸರ್ಕಾರದ ರಾಜತಾಂತ್ರಿಕತೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಜೈ ಶಂಕರ್‌ ಈ ವರ್ಷ ಒಟ್ಟು 33 ವಿದೇಶ ಪ್ರವಾಸ ಕೈಗೊಂಡಿದ್ರು ಅಂತ ವರದಿಯಾಗಿದೆ. ಅಂದ್ಹಾಗೆ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ರಾಜ್ಯ ಸಚಿವ ವಿ.ಮುರಳೀಧರನ್ ಉತ್ತರಿಸಿದ ವರದಿಯಲ್ಲಿ ಈ ಬಗ್ಗೆ ಮಾಹಿತಿ ದೊರಕಿದ್ದು, ಪ್ರಧಾನಿ ಮೋದಿ ಕೂಡ ಈ ವರ್ಷ 12 ದೇಶಗಳಿಗೆ ಭೇಟಿ ನೀಡಿದ್ದಾರೆ. ಫಾರೆನ್‌ ಪಾಲಿಸಿ ವಿಚಾರದಲ್ಲಿ ಭಾರತವು ಪ್ರಮುಖವಾಗಿ ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದ ರಾಷ್ಟ್ರಗಳ ಜೊತೆಗೆ ಹೆಚ್ಚಾಗಿ ತೊಡಗಿಸಿಕೊಂಡಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply