ಕ್ರಿಕೆಟ್‌ ಲೆಜಂಡರಿ ಜೂಲಾನ್‌ ಗೋಸ್ವಾಮಿ ಗೆಲುವಿನ ವಿದಾಯ!

masthmagaa.com:

ಭಾರತೀಯ ಮಹಿಳಾ ಕ್ರಿಕೆಟ್‌ನ ಲೆಜೆಂಡರಿ ವೇಗಿ ಜೂಲಾನ್‌ ಗೋಸ್ವಾಮಿ ಗೆಲುವಿನ ಮೂಲಕ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್‌ನ ಕಾಶಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಗೆಲ್ಲುವದರ ಮೂಲಕ ಭಾರತ ತಂಡ ಸರಣಿಯನ್ನ ಕ್ಲೀನ್‌ ಸ್ವೀಪ್‌ ಮಾಡಿದೆ. ಕೊನೇವರೆಗು ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಕೊನೇ ವಿಕೆಟ್‌ನ್ನ ಆಲ್‌ರೌಂಡರ್‌ ದೀಪ್ತಿ ಶರ್ಮಾ ಬೌಲಿಂಗ್‌ ವೇಳೆ, ನಾನ್‌-ಸ್ಟ್ರೈಕರ್‌ನ್ನ ರನ್‌ ಔಟ್‌ ಮಾಡುವ ಮೂಲಕ ಪಡೆದ್ರು. ಅಂದ್ರೆ ಐಪಿಎಲ್‌ನಲ್ಲಿ ಬಟ್ಲರ್‌ನ್ನ ಅಶ್ವಿನ್‌ ಔಟ್‌ ಮಾಡಿದ್ರಲ್ಲ ಆ ರೀತಿ. ಇದುವರೆಗು ಮ್ಯಾನ್‌ಕೇಡಿಂಗ್‌ ಅಂತ ಕರೀತಾ ಇದ್ದ ಇದನ್ನ ಇತ್ತೀಚೆಗೆ ಐಸಿಸಿ ತನ್ನ ನಿಯಮಗಳಲ್ಲಿ ಸೇರಿಸ್ಕೊಂಡಿತ್ತು. ಇನ್ನು ಸುಮಾರು 20 ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್‌ ಆಡಿದ ಜೂಲಾನ್‌ ಗೋಸ್ವಾಮಿಗೆ ಇಂಗ್ಲೆಂಡ್‌ ತಂಡ ಗಾರ್ಡ್‌ ಆಫ್‌ ಹಾನರ್‌ ಕೊಟ್ಟು ಗೌರವಿಸ್ತು

-masthmagaa.com

Contact Us for Advertisement

Leave a Reply