ಬೀಪ್‌ ಬೈಡೆನ್‌ ಬೀಪ್‌! ಇಸ್ರೇಲ್‌ PMಗೇ ಕೆಟ್ಟ ಬೈಗುಳ!

masthmagaa.com:

ʻಗಾಜಾ ಯುದ್ಧ ಸ್ಟಾರ್ಟ್‌ ಆದಾಗಿನಿಂದ ಅಮೆರಿಕ ಇಸ್ರೇಲ್‌ಗೆ ಬೆನ್ನೆಲುಬಾಗಿ ನಿಂತಿದೆ. ಇಸ್ರೇಲ್‌ ಹಾಕಿದ ತಾಳಕ್ಕೆ ತಕ್ಕ ಹಾಗೇ ಅಮೆರಿಕ ಕುಣೀತಿದೆ….ಯುದ್ಧದಿಂದ ಎರಡೂ ರಾಷ್ಟ್ರಗಳು ಬಹಳ ಕ್ಲೋಸ್‌ ಆಗಿವೆ. ಹೆಚ್ಚಿನ ರಾಷ್ಟ್ರಗಳು ಇಸ್ರೇಲ್‌ ನಡೆಸ್ತಿರೋ ಭೀಕರ ದಾಳಿಗೆ ವಿರೋಧ ವ್ಯಕ್ತಪಡಿಸಿದ್ರೂ, ಅಮೆರಿಕ ಮಾತ್ರ ನಾನಿದ್ದೀನಿ ಫ್ರೆಂಡ್‌ ಅಂತೇಳಿ ನೆರವು ನೀಡ್ತಿದೆ. ಆದ್ರೆ ಅದೇ ಕ್ಲೋಸ್‌ ಫ್ರೆಂಡ್‌ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಇದೀಗ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಬೆನ್ನಹಿಂದೆ ಬಾಯಿಗ್‌ ಬಂದ ಹಾಗೇ ಹೇಳಿದ್ದಾರೆ. ಕೆಟ್ಟ ಪದಗಳನೆಲ್ಲಾ ಬಳಸಿ ಅವಹೇಳನಕಾರಿ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ಆದ್ರೆ ಇಸ್ರೇಲ್‌ ಮುಂದೆ ಮಾತ್ರ ಹಲ್ಲು ಕಿರಿಯುತ್ತಾ ಅದೇ ಫ್ರೆಂಡ್‌ಶಿಪ್‌ ತೋರಿಸ್ತಿದೆ. ಹೀಗಂತ ಅಮೆರಿಕದ ನ್ಯೂಸ್‌ ಚಾನೆಲ್‌ ಒಂದು ರಿಪೋರ್ಟ್‌ ಮಾಡಿದೆ. ಇದ್ರ ಪ್ರಕಾರ, ಗಾಜಾದಲ್ಲಿ ಇಸ್ರೇಲ್‌ ಕಾರ್ಯಚರಣೆ ಬಗ್ಗೆ ಹೀಗೆ ಪ್ರೈವೇಟ್‌ ಆಗಿ ಮಾತುಕತೆ ನಡೆಸ್ತಿರೋವಾಗ ಬೈಡನ್‌ ನೆತನ್ಯಾಹು ಬಗ್ಗೆ ಅವಹೇಳನ ಮಾಡಿದ್ದಾರೆ. ಬಳಸಬಾರದ ಕೆಟ್ಟ ಪದಗಳನ್ನ ಬಳಸಿ ಬೈದಿದ್ದಾರಂತೆ. ʻಇಸ್ರೇಲ್‌ ಕದನವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮಾಡಲು ನಾನು ಟ್ರೈ ಮಾಡ್ತಿದ್ದೇನೆ. ಆದ್ರೆ ನೆತನ್ಯಾಹು ಸಿಕ್ಕಾಪಟ್ಟೆ ಸಮಸ್ಯೆ ಕ್ರಿಯೇಟ್‌ ಮಾಡ್ತಿದ್ದಾರೆ. ಅವ್ರೊಂದಿಗೆ ಡೀಲ್‌ ಮಾಡೋಕೆ ಆಗ್ತಿಲ್ಲ. ನೆತನ್ಯಾಹು ಗಾಜಾ ಮೇಲೆ ನಡೆಸ್ತಿರೋ ದಾಳಿ ಜಾಸ್ತಿಯಾಯ್ತು…ಸೋ ಅದು ಸ್ಟಾಪ್‌ ಆಗ್ಲೇಬೇಕುʼ ಅಂದಿದ್ದಾರೆ. ಇದೇ ವೇಳೆ ನೆತನ್ಯಾಹುಗೆ ಬೈಡನ್‌ ಸಿಟ್ಟಿನಿಂದ ಕೆಟ್ಟ ಪದಗಳನ್ನ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಬೈಡನ್‌ ಈ ರೀತಿ ಕಮೆಂಟ್‌ ಮಾಡಿರೋದನ್ನ ಕಿವಿಯಾರೆ ಕೇಳಿರೋ ಮೂರು ಮಂದಿ ಈ ವಿಷಯವನ್ನ ಹೊರಹಾಕಿದ್ದಾರೆ . ಅಂದ್ಹಾಗೆ ಈ ರೀತಿ ನೆತನ್ಯಾಹುವಿಗೆ ಬೈಡನ್‌ ಅವಹೇಳನ ಮಾಡಿರೋದು ಇದೇನು ಮೊದಲಲ್ಲ. ಇತ್ತೀಚೆಗಷ್ಟೇ ಇದೇ ರೀತಿ ಪ್ರೈವೇಟ್‌ ಮಾತುಕತೆ ವೇಳೆ ನೆತನ್ಯಾಹುರನ್ನ ಬೈಡನ್‌ ಕೆಟ್ಟ ಪದಗಳಿಂದ ಬೈದಿದ್ದಾರೆ ಅಂತ ಸುದ್ದಿ ಬಂದಿತ್ತು. ಆದ್ರೆ ಜೋ ಬೈಡನ್‌ ವಿರುದ್ಧ ಮಾಡಿರುವಂತಹ ಈ ಆರೋಪವನ್ನ ಮಾತ್ರ ಅವ್ರ ವಕ್ತಾರ ಆಂಡ್ರ್ಯೂ ಬೇಟ್ಸ್‌ ಅಲ್ಲಗಳೆದಿದ್ದಾರೆ. ʻಅಧ್ಯಕ್ಷ ಜೋ ಬೈಡನ್‌ ನೆತನ್ಯಾಹುರಿಗೆ ಕೆಟ್ಟ ಪದಗಳನ್ನ ಬಳಸಿಲ್ಲ..ಮುಂದೇನೂ ಬಳಸಲ್ಲʼ ಅಂತ ಹೇಳಿದ್ದಾರೆ. ಇನ್ನು ಫೆಬ್ರುವರಿ 11 ರಂದು ಬೈಡನ್‌ ನೆತನ್ಯಾಹು ಜೊತೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ರು. ಈ ವೇಳೆ, ʻಗಾಜಾ ಪಟ್ಟಿಯಲ್ಲಿರೋ ರಫಾ ನಗರದ ಮೇಲೆ ಸರಿಯಾದ ಪ್ಲಾನ್‌ ಇಲ್ದೇ ಇಸ್ರೇಲ್‌ ಸೇನಾ ಕಾರ್ಯಚರಣೆ ನಡೆಸ್ವಾರ್ದು. ಅಲ್ಲಿ ಸುಮಾರು 10 ಲಕ್ಷ ಜನರು ಆಶ್ರಯ ಪಡೀತಿದ್ದಾರೆ. ಆದ್ರಿಂದ ಅವ್ರ ಸೇಫ್ಟಿ ಮುಖ್ಯʼ ಅಂತ ಬೈಡನ್‌ ತಿಳಿಸಿದ್ರು ಅಂತ ವೈಟ್‌ ಹೌಸ್‌ ಹೇಳ್ಕೊಂಡಿತ್ತು.

-masthmagaa.com

Contact Us for Advertisement

Leave a Reply