ಟ್ರಂಪಿಗೆ ಅವಮಾನ! ಈ ಸಲ ಏನು ಗೊತ್ತಾ?

masthmagaa.com:

ನಮಗಂತೂ ಟ್ರಂಪ್​ಗೆ ಆಗ್ತಿರೋ ದಿನಕ್ಕೊಂದು ಹೊಸ ಅವಮಾನಗಳ ಬಗ್ಗೆ ಹೇಳಿ ಹೇಳಿ ಬೇಜಾರಾಗೋಗಿದೆ. ಯಾವ ಅಮೆರಿಕ ಅಧ್ಯಕ್ಷ ಕೂಡಾ ಅಧಿಕಾರದಿಂದ ಇಳಿದು ಹೋಗೋವಾಗ ಇಷ್ಟು ಅವಮಾನ ಎದುರಿಸಿ ಹೋಗಿರಲಿಲ್ಲ. ಇದೀಗ ಟ್ರಂಪ್ ಮುಖದ ಮೇಲೆ ಮತ್ತೊಂದು ಬಂದಪ್ಪಳಿಸಿದೆ. ಅವರಿಗೆ ಇಂಟೆಲಿಜೆನ್ಸ್ ಬ್ರೀಫಿಂಗ್ ಕೊಡಬಾರದು ಅಂತಾ ಬೈಡೆನ್ ಹೇಳಿದ್ದಾರೆ. ಅಮೆರಿಕದಲ್ಲಿ ಒಂದು ಸಂಪ್ರದಾಯ ಇತ್ತು. ಔಟ್ ಗೋಯಿಂಗ್ ಪ್ರೆಸಿಡೆಂಟ್ಸ್, ಅಂದ್ರೆ ಚುನಾವಣೆ ನಡೆದು ಹೊಸ ಅಧ್ಯಕ್ಷ ಆಯ್ಕೆ ಆಗುವಾಗ, ಈ ಹಿಂದೆ ಇದ್ದವರು ಅಧಿಕಾರ ಇಳಿದು ಹೋಗ್ತಾರಲಾ? ಅವರಿಗೆ ಇಂಟೆಲಿಜೆನ್ಸ್ ಬ್ರೀಫಿಂಗ್ ಕಡೋ ಪದ್ದತಿ ಇದೆ. ಇಂಟೆಲಿಜೆನ್ಸ್​ನವ್ರು ಅಮೆರಿಕ ಅಧ್ಯಕ್ಷರಿಗೆ ಕೊಡೋ ಥರ ಗುಪ್ತಚರ ಮಾಹಿತಿಯನ್ನ ನಿಕಟ ಪೂರ್ವ ಅಧ್ಯಕ್ಷರಿಗೂ ಕೊಡ್ತಾರೆ.

ಇದೊಂದು ಗೌರವದ ಸಂಕೇತವಾಗಿ ಅಷ್ಟೇ.. ಅಧಿಕಾರಾವಧಿ ಮುಗಿದ್ರೂ ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಕೊಡುಗೆ ಇನ್ನೂ ಬೇಕು ಅನ್ನೋ ಅರ್ಥದಲ್ಲಿ ಇದನ್ನ ಮಾಡಲಾಗುತ್ತೆ. ಆದ್ರೆ ಟ್ರಂಪ್​ಗೆ ಈ ಇಂಟೆಲಿಜೆನ್ಸ್ ಬ್ರೀಫಿಂಗ್ ಕೊಡೋ ಅಗತ್ಯ ಇಲ್ಲ ಅಂತಾ ಬೈಡೆನ್ ಹೇಳಿದ್ದಾರೆ. ಟ್ರಂಪ್ ಅಂತವರಿಗೆ ಏನಕ್ಕೆ ಇದೆಲ್ಲ..? ಏನ್ ಪ್ರಯೋಜನ ಇದೆ ಅವರ ಜೊತೆ ಗುಪ್ತಚರ ಮಾಹಿತಿ ಶೇರ್ ಮಾಡಿಕೊಂಡು? ಅಪ್ಪಿ ತಪ್ಪಿ ಅವರೇನಾದ್ರೂ ಬಾಯಿಬಿಟ್ರೆ ಅಪಾಯ ಇದೆ ಬಿಟ್ರೆ ದೇಶಕ್ಕೆ ಬೇರೇನೂ ಲಾಭ ಇಲ್ಲ. ಅವರ ಮಾನಸಿಕ ಸ್ಥಿಮಿತಾನೇ ಸರಿ ಇಲ್ಲ ಅಂತಾ ಬೈಡೆನ್ ಹೇಳಿದ್ದಾರೆ. ಜೊತೆಗೆ ವೈಟ್ ಹೌಸ್​ನ ಇಂಟೆಲಿಜೆನ್ಸ್ ಕಮಿಟಿ ಚೇರ್​ಮನ್​​ ಆಡಮ್ ಶಿಫ್​ ಮಾತನಾಡಿ, ಈಗಾಗಲೀ, ಮುಂದಾಗಲೀ ಟ್ರಂಪ್​ಗೆ ಇಂಟೆಲಿಜೆನ್ಸ್ ಬ್ರೀಫಿಂಗ್​ ಕೊಡುವಷ್ಟು ನಂಬಿಕೆ ಯಾರಿಗೂ ಉಳಿದಿಲ್ಲ ಅಂತಾ ಹೇಳಿ ಮತ್ತಷ್ಟು ಚುಚ್ಚಿದ್ದಾರೆ.

-masthmagaa.com

Contact Us for Advertisement

Leave a Reply