ಪುಟಿನ್​​ಗೆ ಬೈಡೆನ್​ ಕೊಟ್ಟಿದ್ದೆಂಥಾ ಗಿಫ್ಟ್​ ಗೊತ್ತಾ..?

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಯಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಈ ವೇಳೆ ಜೋ ಬೈಡೆನ್ ಪುಟಿನ್​​ಗೆ ಒಂದು ವಿಶೇಷವಾದ ಗಿಫ್ಟ್​​​ಗಳನ್ನು​ ಕೊಟ್ಟಿದ್ದಾರೆ. ಅಮೆರಿಕದಲ್ಲಿ ತಯಾರಾದ ಒಂದು ಜೊತೆ ಸನ್​​ ಗ್ಲಾಸ್ ಮತ್ತು ಸ್ಪಟಿಕವನ್ನು​ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಅದ್ರಲ್ಲೇನು ವಿಶೇಷ ಅನ್ಬೋದು.. ವಿಶೇಷ ಇದೆ.. ಸಾಮಾನ್ಯವಾಗಿ ಈ ಸನ್​ಗ್ಲಾಸ್​​ನ್ನು ಅಮೆರಿಕದಲ್ಲಿ ಯೋಧರು ಧರಿಸ್ತಾರೆ. ರ್ಯಾಂಡೋಲ್ಫ್​ ಇಂಜಿನೀರಿಂಗ್ ಅನ್ನೋ ಸಂಸ್ಥೆ ಇದನ್ನು ಉತ್ಪಾದಿಸುತ್ತೆ. 1978ರಿಂದಲೂ ತಿಂಗಳಿಗೆ 25 ಸಾವಿರ ಜೊತೆಯಷ್ಟು ಸನ್​ಗ್ಲಾಸ್​​ಗಳನ್ನು ಉತ್ಪಾದಿಸಿ ಸೇನೆಗೆ ಕೊಡ್ತಾ ಇದೆ ಈ ಸಂಸ್ಥೆ. ಈಗ ಪುಟಿನ್​​ಗೆ ಕೊಟ್ಟಿರೋ ಸನ್​ಗ್ಲಾಸ್​​​ನ್ನು6 ವಾರ ಟೈಂ ತಗೊಂಡು ರೆಡಿ ಮಾಡಲಾಗಿದೆ ಅಂತ ಸಂಸ್ಥೆ ತಿಳಿಸಿದೆ. ಇದ್ರ ಮೇಲೆ ಬೈಡೆನ್ ಸಹಿ ಕೂಡ ಹಾಕಿದ್ದಾರೆ. ಜೋ ಬೈಡೆನ್ ಕೂಡ ಈ ಸನ್​​ ಗ್ಲಾಸ್​​ನ ದೊಡ್ಡ ಫ್ಯಾನ್ ಆಗಿದ್ದಾರೆ. ಇನ್ನು ಈ ಭೇಟಿ ಬಗ್ಗೆ ಮಾತನಾಡಿರೋ ಪುಟಿನ್, ರಷ್ಯಾ ಇದೇ ರೀತಿ ಮಾತುಕತೆಯನ್ನು ಮುಂದುವರಿಸಲು ಬಯಸುತ್ತೆ. ಅದು ಕೂಡ ಅಮೆರಿಕಾಗೂ ಇಷ್ಟವಿದ್ರೆ ಮಾತ್ರ ಅಂತ ಹೇಳಿದ್ದಾರೆ. ಇದೇ ವೇಳೆ ಅಮೆರಿಕನ್ನರಿಗೆ ಅವರಿಗೆ ಅವರೇ ಮುಖ್ಯ.. ಬೇರೆಯವರು ಮುಖ್ಯವಲ್ಲ ಅಂತ ಥಾಂಟ್ ಕೂಡ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply