ಅರಬ್‌ ದೇಶಗಳು ಇಸ್ರೇಲ್‌ ಗುರುತಿಸೋಕೆ ರೆಡಿ: ಬೈಡೆನ್‌ ಶಾಕಿಂಗ್‌ ಹೇಳಿಕೆ

masthmagaa.com:

ಅರಬ್‌ ಜಗತ್ತಿನಲ್ಲಿ ದೊಡ್ಡ ಬೆಳವಣಿಗೆಯಾಗೋ ಸೂಚನೆ ಸಿಕ್ತಿದೆ. ಅರಬ್‌ ರಾಷ್ಟ್ರಗಳು ಇಸ್ರೇಲ್ ದೇಶವನ್ನ ರೆಕಗ್ನೈಸ್‌ ಮಾಡೋಕೆ ರೆಡಿ ಇವೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌‌ ಬಿಗ್‌ ಸ್ಟೇಟ್‌ ಮೆಂಟ್‌ ಕೊಟ್ಟಿದ್ದಾರೆ. ಸೌದಿ ಸೇರಿದಂತೆ ಹಲವು ಗಲ್ಫ್‌ ರಾಷ್ಟ್ರಗಳ ಜೊತೆಗೆ ನಾವು ಮಾತುಕತೆ ನಡೆಸ್ತಾ ಇದ್ದೇವೆ. ಭವಿಷ್ಯದಲ್ಲಿ ಇಸ್ರೇಲ್‌-ಪ್ಯಾಲಸ್ತೀನ್‌ ಸಮಸ್ಯೆಗೆ 2 ಸ್ಟೇಟ್‌ ಸೊಲ್ಯೂಷನ್‌ ಸಿಗೋ ಸಾಧ್ಯತೆ ಇದೆ. ಇಸ್ರೇಲ್‌ನ್ನ ದೇಶ ಅಂತ ರೆಕಗ್ನೈಸ್‌ ಮಾಡೋಕೆ ಆ ದೇಶಗಳೆಲ್ಲಾ ಪ್ರಿಪೇರ್‌ ಆಗಿವೆ ಅಂತೇಳಿದ್ದಾರೆ. ಅಲ್ಲದೆ ಪೋಸ್ಟ್‌ ಗಾಜಾ ಪ್ಲಾನ್‌ ಅಂತ ಒಂದು ಯೋಜನೆ ಇರ್ಬೇಕು. ಅದ್ರಲ್ಲಿ 2 ಸ್ಟೇಟ್‌ ಸೊಲ್ಯೂಶನ್‌ ಇರ್ಬೇಕು ಅಂತ ಬೈಡೆನ್‌ ಹೇಳಿದ್ದಾರೆ. ಅಂದ್ಹಾಗೆ ಇಸ್ರೇಲ್‌ ಗೆ ಅರಬ್‌ ದೇಶಗಳು ಇದುವರೆಗೂ ಒಂದು ದೇಶ ಅಂತ ಸ್ಥಾನಮಾನ ಕೊಟ್ಟಿಲ್ಲ. ಈ ಕಡೆ ಪಾಕಿಸ್ತಾನ ಅಂತೂ ತನ್ನ ಪಾಸ್‌ಪೋರ್ಟ್‌ ಮೇಲೆಯೇ ಇಸ್ರೇಲ್‌ಗೆ ನಾವು ವಿಮಾನ ಸೇವೆ ಕೊಡಲ್ಲ ಅಂತೇಳಿದೆ. ಆದ್ರೆ ಸೌದಿ, ಈಜಿಪ್ಟ್‌ ಯುಇಎಗಳು ಕದ್ದುಮುಚ್ಚಿ ಇಸ್ರೇಲ್‌ ಜೊತೆಗೆ ಸಂಬಂಧ ವೃದ್ದಿ ಮಾಡ್ತಿದ್ವು. ಅಮೆರಿಕನೇ ಟ್ರಂಪ್‌ ಅವಧಿಯಲ್ಲಿ ಅಬ್ರಾಹಂ ಅಕಾರ್ಡ್‌ ಮೂಲಕ ಯುಎಇ, ಬಹ್ರೇನ್‌ ದೇಶಗಳ ಜೊತೆಗೆ ಇಸ್ರೇಲ್‌ ಸಂಬಂಧ ಗಟ್ಟಿ ಮಾಡೋ ಪ್ರಯತ್ನ ಮಾಡಿತ್ತು. ಆದ್ರೆ ಗಾಜಾ ಯುದ್ದ ಬಳಿಕ ಗಲ್ಪ್‌ ಮತ್ತು ಇಸ್ರೇಲ್‌ ಸಂಬಂಧ ಮತ್ತೆ ಹಳಸಿತ್ತು. ಇದರ ನಡುವೆಯೇ ಅಮೆರಿಕ ಈ ರೀತಿ ಹೇಳಿಕೆ ಕೊಟ್ಟಿದೆ.

-masthmagaa.com

Contact Us for Advertisement

Leave a Reply