ಅಮೆರಿಕ: ಅಧ್ಯಕ್ಷ ಜೋ ಬೈಡನ್‌ ಪುನಃ ಅರಳು ಮರಳು ಪ್ರದರ್ಶನ!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತೊಮ್ಮೆ ತಮ್ಮ ಅರಳು ಮರಳಿನ ಕಾರಣದಿಂದ ಸುದ್ದಿಯಾಗಿದ್ದಾರೆ. ಅಮೆರಿಕದಲ್ಲಿ ಹಣದುಬ್ಬರ ಕಡಿಮೆ ಮಾಡಲು ಸರ್ಕಾರ ಯಾವ್‌ ರೀತಿ ಪ್ರಯತ್ನ ಪಡ್ತಿದೆ ಅಂತ ಹೇಳೋವಾಗ ಬೈಡನ್‌ ಒಂದು ವಿಚಿತ್ರ ಹೇಳಿಕೆ ಕೊಟ್ಟಿದ್ದಾರೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಹಣದುಬ್ಬರ ರೇಟ್‌ ಹೊಂದಿರೋ ರಾಷ್ಟ್ರಗಳ ಪೈಕಿ ಅಮೆರಿಕ ಕೂಡ ಒಂದು ಅಂತ ಹೇಳೋ ಬದಲು… ಇಡೀ ಅಮೆರಿಕದಲ್ಲೇ ಅತ್ಯಂತ ಕಡಿಮೆ ಹಣದುಬ್ಬರ ರೇಟ್‌ ಹೊಂದಿರೋ ದೇಶವಂದ್ರೆ ಅದು ನಾವೇ..ಅಮೆರಿಕದಲ್ಲೇ ನಮ್ಮದು ಕಡಿಮೆ ಹಣದುಬ್ಬರ ಹೊಂದಿರೋ ದೇಶ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply