ಜೋರ್ಡನ್ ಪಾರ್ಲಿಮೆಂಟ್​​ನಲ್ಲಿ ಹೊಡೆದಾಡಿಕೊಂಡ ಸಂಸದರು!

masthmagaa.com:

ಜೋರ್ಡಾನ್​​​ ಸಂಸತ್​​​​ನಲ್ಲಿ ಸಂಸದರು ಹೊಡೆದಾಡಿಕೊಂಡಿರೋ ಘಟನೆ ವರದಿಯಾಗಿದೆ. ರಾಜಧಾನಿ ಅಮ್ಮಾನ್​​ನಲ್ಲಿರೋ ಹೌಸ್ ಆಫ್ ರೆಪ್ರೆಸೆಂಟೆಟಿವ್​​ನಲ್ಲಿ ಸಾಂವಿಧಾನಿಕ ಸುಧಾರಣೆ, ತಿದ್ದುಪಡಿಗಳ ಬಗ್ಗೆ ಚರ್ಚೆ ನಡೀತಾ ಇತ್ತು. ಈ ವೇಳೆ ಸಂಸದರ ನಡುವಿನ ಚರ್ಚೆ ವಿಕೋಪಕ್ಕೆ ಹೋಗಿ, ವಾಗ್ವಾದ ನಡೆದಿದೆ. ಕೊನೆಗೆ ಸಂಸದರು ಪರಸ್ಪರ ಗುದ್ದಾಡುತ್ತಾ, ತಳ್ಳುತ್ತಾ, ಬಾಯಿಗೆ ಬಂದಂತೆ ಬೈದುಕೊಳ್ಳುತ್ತಾ ಮುನ್ನುಗ್ಗಿದ್ದಾರೆ. ಒಬ್ಬರಿಗೊಬ್ಬರು ಪಂಚ್ ಕೊಟ್ಕೊಂಡು ಹಂಗಾಮಾ ಮಾಡಿದ್ಧಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಂದಹಾಗೆ ಜೋರ್ಡಾನ್​​​ನ ಸಂವಿಧಾನಕ್ಕೆ 1952ರಿಂದ ಈವರೆಗೆ 29 ಬಾರಿ ತಿದ್ದುಪಡಿ ನಡೆದಿದೆ.

-masthmagaa.com

Contact Us for Advertisement

Leave a Reply