‘ಮುಸ್ಲಿಂ ವ್ಯಾಪಾರ’ ವಿವಾದ: ಖಾದರ್-ರೇಣುಕಾಚಾರ್ಯ ಫೈಟ್

masthmagaa.com:

ಮುಸ್ಲಿಂ ವ್ಯಾಪಾರ ನಿರ್ಬಂಧ’ ವಿವಾದ ವಿಧಾನಸಭೆ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಯುಟಿ ಖಾದರ್ ಮತ್ತು ರಿಜ್ವಾನ್ ಅರ್ಷದ್ ಕೇಳಿದ ಪ್ರಶ್ನೆಗೆ ಮಾಧುಸ್ವಾಮಿ ಉತ್ತರಿಸಿದ್ರು. ಆದ್ರೆ ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೀತು. ಖಾದರ್, ರೇಣುಕಾಚಾರ್ಯ ಪರಸ್ಪರ ವಾಗ್ದಾಳಿ ನಡೆಸಿಕೊಂಡ್ರು. ಖಾದರ್ ಮಾತನಾಡಿ, ಕೆಲ ಕ್ರೂರಿ, ಹೇಡಿಗಳು ಪೋಸ್ಟರ್ ಹಾಕ್ತಾರೆ. ಆದ್ರೆ ಅವರ ಹೆಸರು ಹಾಕಿಕೊಳ್ಳೋದಿಲ್ಲ ಅಂತ ಹೇಳಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮುಕ್ತವ್ಯಾಪಾರಕ್ಕೆ ಅವಕಾಶವಿದೆ. ಜಾತ್ರೆ ಬೇರೆ, ಏಲಂ ಬೇರೆ ಅನ್ನಕ್ಕಾಗಲ್ಲ. ಯಾರಾದ್ರೂ ದುರುದ್ದೇಶದಿಂದ ಸೌಹಾರ್ಧಕ್ಕೆ ಧಕ್ಕೆ ತರಲು ಯತ್ನಿಸಿದ್ರೆ ಅದಕ್ಕೆ ಸರ್ಕಾರ ಅವಕಾಶ ನೀಡಬಾರದು ಅಂತ ಹೇಳಿದ್ರು. ಇದಲ್ಲದೆ ಈ ರೀತಿ ತಪ್ಪು ಸಂದೇಶ ರವಾನಿಸ್ತಿರೋ ಸಂಘಟನೆಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಬೇಕು ಅಂತ ಕಾಂಗ್ರೆಸ್ ಒತ್ತಾಯಿಸಿದೆ.

-masthmagaa.com

Contact Us for Advertisement

Leave a Reply