masthmagaa.com:

ನಟ ಸತ್ಯಜಿತ್ (ಸೈಯದ್ ನಿಜಾಮುದ್ದೀನ್) ಮತ್ತು ಅವರ ಪುತ್ರಿ ಅಖ್ತರ್ ಸ್ವಲೇಹಾ ನಡುವಿನ ಮನೆ ಜಗಳ ಈಗ ಬೀದಿಗೆ ಬಂದಿದೆ. ಮನೆ, ಮಠ ಮಾರಿ, ಸಾಲ ಮಾಡಿ ಮಗಳನ್ನ ಪೈಲಟ್ ಮಾಡಿದ್ದೇನೆ. ಆದ್ರೆ ಈಗ ನಮ್ಮನ್ನ ಮಗಳು ಮರೆತು ಬಿಟ್ಟಿದ್ದಾಳೆ, ದುಡ್ಡು ಕಳಿಸ್ತಿಲ್ಲ ಅಂತೆಲ್ಲಾ ನಟ ಸತ್ಯಜಿತ್ 4 ವಿಡಿಯೋ ಮಾಡಿ ತಮ್ಮ ನೋವನ್ನ ತೋಡಿಕೊಂಡಿದ್ದರು. ಆದ್ರೆ 9 ತಿಂಗಳ ತುಂಬು ಗರ್ಭಿಣಿಯಾಗಿರೋ ಅಖ್ತರ್ ಸ್ವಲೇಹಾ, ನಾವ್ ಹಣ ಕಳಿಸಿದ್ದೇವೆ. ಮದ್ವೆಯಾಗಿ 3 ವರ್ಷವಾದ ಬಳಿಕ ನನ್ನ ಗಂಡ ನನ್ನನ್ನ ಬದಲಾಯಿಸಿದ್ದಾರೆ ಅಂತ ನಮ್ಮ ತಂದೆ ಈಗ ಹೇಳ್ತಿದ್ದಾರೆ. 4 ವಿಡಿಯೋ ಮಾಡಿ ನಮ್ಮ ಮಾನ ಹರಾಜು ಹಾಕಿದ್ದಾರೆ, ಕಿರುಕುಳ ಕೊಟ್ಟಿದ್ದಾರೆ, ಬೆದರಿಕೆ ಹಾಕಿದ್ದಾರೆ ಅಂತೆಲ್ಲಾ ಅಖ್ತರ್ ಸ್ವಲೇಹಾ ಹೇಳಿದ್ದಾರೆ. ಮತ್ತೊಂದುಕಡೆ ನಂಗೀಗ ಆಕೆಯಿಂದ ಯಾವ್ದೇ ಹಣನೂ ಬೇಡ, ಅವಳೂ ಬೇಕಾಗಿಲ್ಲ ಅಂತ ಸತ್ಯಜಿತ್​ ಹೇಳಿದ್ದಾರೆ. ಹಣ ಬೇಡ ಅಂದ್ರೆ ವಿಡಿಯೋ ಮಾಡಿದ್ಯಾಕೆ, ಅದರಿಂದ ನನ್ನ ಮತ್ತ ಗಂಡನ ಬ್ಯುಸಿನೆಸ್​ಗೆ ಪೆಟ್ಟು ಬಿದ್ದಿದೆ ಅನ್ನೋದು ಅಖ್ತರ್ ಸ್ವಲೇಹಾ ಆರೋಪ. ಜೊತೆಗೆ ತಂದೆ ವಿರುದ್ಧವೇ ಕಾನೂನು ಹೋರಾಟ ಶುರು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply