ʻನಂದಿನಿʼ ಹಾಲು ರಾಯಭಾರಿಯಾಗಿ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಆಯ್ಕೆ!

masthmagaa.com:

ತಿರುಪತಿ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡಲು ಅನುಮತಿ ನೀಡಿಲ್ಲ ಅಂತ KMF ಅಧ್ಯಕ್ಷರು ಹೇಳಿರುವ ಮಾತು ಸತ್ಯಕ್ಕೆ ದೂರವಾಗಿದೆ ಅಂತ TTD ತಿರುಪತಿ ತಿರುಮಲ ದೇವಾಸ್ಥಾನಂ ಸ್ಪಷ್ಟಪಡಿಸಿದೆ. ಕೆಎಂಎಫ್‌ ಅಧ್ಯಕ್ಷರು ನೀಡಿರುವ ಹೇಳಿಕೆ ಸರಿಯಲ್ಲ. ಯಾಕಂದ್ರೆ ತುಪ್ಪವೂ ಸೇರಿ ತನಗೆ ಬೇಕಾದ ಎಲ್ಲಾ ವಸ್ತುಗಳನ್ನು ಟಿಟಿಡಿ ಇ–ಟೆಂಡರ್‌ ಮೂಲಕ ಸಂಗ್ರಹಿಸುತ್ತದೆ. ಇ–ಟೆಂಡರ್ ಮೂಲಕ ಭಾರತದಾದ್ಯಂತ ಬಿಡ್‌ಗಳನ್ನು ಆಹ್ವಾನಿಸಲಾಗುತ್ತದೆ. ಟೆಂಡರ್ ತೆರೆಯುವವರೆಗೂ ಯಾರೆಲ್ಲಾ ಬಿಡ್‌ ಸಲ್ಲಿಸಿದ್ದಾರೆ ಅನ್ನುವ ಮಾಹಿತಿಯೂ ನಮಗೆ ಇರುವುದಿಲ್ಲ. ಟಿಟಿಡಿ ಸರ್ಕಾರಿ ಸಂಸ್ಥೆ ಆಗಿರೋದರಿಂದ ಇ-ಟೆಂಡರ್ ನಿಯಮಗಳ ಪ್ರಕಾರ ನಾವು ಬಿಡ್ ಅಂತಿಮಗೊಳಿಸುತ್ತೇವೆ. ಸೋ ಇ- ಟೆಂಡರ್‌ನಲ್ಲಿ ಯಾರು ಕಡಿಮೆ ಮೊತ್ತಕ್ಕೆ ಗುಣಮಟ್ಟದ ತುಪ್ಪ ಸರಬರಾಜು ಮಾಡಲು ಒಪ್ಪಿಗೆ ನೀಡುತ್ತಾರೋ ಅವರಿಗೆ ಗುತ್ತಿಗೆ ನೀಡುತ್ತೇವೆ ಅಂತ TTDಯ ಧರ್ಮಾರೆಡ್ಡಿಯವರು ಹೇಳಿದ್ದಾರೆ. ಅಂದ್ಹಾಗೆ ನಿನ್ನೆ ಈ ಬಗ್ಗೆ ಮಾತಾಡಿದ್ದ KMF ಅಧ್ಯಕ್ಷ ಭೀಮಾ ನಾಯ್ಕ್‌, ತುಪ್ಪದ ದರ ಪ್ರಸ್ತಾವನೆಯನ್ನು ಟಿಟಿಡಿ ಒಪ್ಪಿಕೊಂಡಿಲ್ಲ ಅಂತ ಹೇಳಿದ್ರು. ಇದೀಗ ನಮಗೆ ಬಿಡ್‌ ಹಾಗೂ ದರದ ಬಗ್ಗೆ ಗೊತ್ತೇ ಇರಲ್ಲ. ಕಡಿಮೆ ಬೆಲೆ ಇರೋ ತುಪ್ಪವನ್ನೇ ನಾವು ಖರೀದಿ ಮಾಡ್ತೇವೆ ಅಂತ TTD ಹೇಳಿದೆ.

ಇತ್ತ ಟೆಂಡರ್‌ ಕೈತಪ್ಪಿದಕ್ಕೆ ನಂದಿನಿಗೆ ಯಾವುದೇ ನಷ್ಟವಾಗೋದಿಲ್ಲ. ಟೆಂಡರ್‌ ಪಡಿಬೇಕು ಅನ್ನೋ ಉದ್ದೇಶಕ್ಕೆ ಬೆಲೆಯಲ್ಲಿ ರಾಜಿ ಮಾಡ್ಕೊಂಡು ನಷ್ಟಕ್ಕೆ ಗುರಿಯಾಗೋ ಅಗತ್ಯವಿಲ್ಲ. ನಮ್ಮ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಯಾವ ಟೆಂಡರ್ ಕೈತಪ್ಪಿದರೂ ನಷ್ಟವಾಗಲ್ಲ ಅಂತ ಕಾಂಗ್ರೆಸ್‌ ಹೇಳಿದೆ. ಇನ್ನೊಂದ್‌ ಕಡೆ ನಂದಿನಿ ಹಾಲು ಉತ್ಪನ್ನಗಳಿಗೆ ರಾಯಭಾರಿಯಾಗಿ ಹೆಸರಾಂತ ನಟ ಶಿವರಾಜ್ ಕುಮಾರ್ ಅವ್ರನ್ನ KMF ಆಯ್ಕೆ ಮಾಡಿದೆ. ಈ ಬಗ್ಗೆ ಶಿವರಾಜ್ ಕುಮಾರ್ ಜೊತೆ ಕೆಎಂಎಫ್ ಅಧಿಕಾರಿಗಳು ಮಾತುಕತೆ ನಡೆಸಿ, ಅವ್ರನ್ನ ಒಪ್ಪಿಸಿರೋದಾಗಿ ಹೇಳಿದ್ದಾರೆ. ಅಂದ್ಹಾಗೆ 1996ರಿಂದ ಡಾ.ರಾಜ್ ಕುಮಾರ್ ರಾಯಭಾರಿಯಾಗಿದ್ದರೆ, ಆ ಸ್ಥಾನಕ್ಕೆ 2009ರಲ್ಲಿ ಪುನೀತ್ ನೇಮಕವಾಗಿದ್ದರು. ಇದೀಗ 2023ರಿಂದ ಆ ಜವಾಬ್ದಾರಿಯನ್ನು ಶಿವಣ್ಣ ವಹಿಸಿಕೊಂಡಂತಾಗಿದೆ.

-masthmagaa.com

Contact Us for Advertisement

Leave a Reply