ಇಟಾಲಿಯನ್‌ ಹಾಗೂ ಸ್ಪ್ಯಾನಿಶ್‌ ಭಾಷೆಯಲ್ಲೂ ಬರಲಿದೆ ಕಾಂತಾರ!

masthmagaa.com:

ಕನ್ನಡದ ಹೆಮ್ಮೆಯ ಕಾಂತಾರ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಭಾರತೀಯ ಚಿತ್ರರಂಗದಲ್ಲಿ ಮೆಚ್ಚುಗೆ ಗಳಿಸಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂತಾರ ನಿರ್ಮಾಪಕರು ಈ ಚಿತ್ರವನ್ನ ಇಟಾಲಿಯನ್‌ ಹಾಗೂ ಸ್ಪ್ಯಾನಿಶ್‌ ಭಾಷೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಹೊಂಬಾಳೆ ಫಿಲ್ಮ್ಸ್‌, ಭಾರತೀಯರು ಸೇರಿದಂತೆ ಜಗತ್ತಿನ ಸಿನಿಪ್ರಿಯರ ಮನಗೆದ್ದಿರುವ ನಮ್ಮ ಕಾಂತಾರವನ್ನ ಶೀಘ್ರದಲ್ಲೇ ಇಟಾಲಿಯನ್‌ ಹಾಗೂ ಸ್ಪ್ಯಾನಿಶ್‌ ಭಾಷೆಯಲ್ಲಿ ಅಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತೆ ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply