ಕೆ.ಎಲ್. ರಾಹುಲ್ ಏಕೆ ತಂಡದಲ್ಲಿಲ್ಲ ಅಂತ ಕೊಹ್ಲಿಗೆ ಕಪಿಲ್ ದೇವ್ ಪ್ರಶ್ನೆ

ನ್ಯೂಜಿಲೆಂಡ್‌ ವಿರುದ್ಧ ವೆಲ್ಲಿಂಗ್ಟನ್‌ನ ಬೇಸಿನ್​ ರಿಸರ್ವ್​​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿರುವುದನ್ನ ಮಾಜಿ ನಾಯಕ ಕಪಿಲ್‌ ದೇವ್‌ ತೀವ್ರವಾಗಿ ಟೀಕಿಸಿದ್ದಾರೆ. ಅದ್ರಲ್ಲೂ ಪ್ರತಿ ಪಂದ್ಯದಲ್ಲೂ ಪ್ಲೇಯಿಂಗ್ ಇಲೆವೆನ್ ಚೇಂಜ್ ಮಾಡ್ತಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಎಬಿಪಿ ನ್ಯೂಸ್​ ಜೊತೆ ಮಾತನಾಡಿದ ಕಪಿಲ್ ದೇವ್, ‘ನ್ಯೂಜಿಲೆಂಡ್‌ ತಂಡವನ್ನ ಹೊಗಳಲೇಬೇಕು. ಅವರು ಶ್ರೇಷ್ಠ ಆಟ ಆಡಿದ್ದಾರೆ. 3 ಏಕದಿನ ಪಂದ್ಯ, ನಂತ್ರ ಮೊದಲ ಟೆಸ್ಟ್​ನಲ್ಲಿ ಕಿವೀಸ್‌ ಶ್ರೇಷ್ಠ ಆಟ ತೋರಿದೆ. ಇದನ್ನ ವಿಮರ್ಶೆ ಮಾಡಿದ್ರೆ ಭಾರತ ತಂಡದಲ್ಲಿ ಇಷ್ಟೊಂದು ಬದಲಾವಣೆ ಮಾಡುವ ಅಗತ್ಯವೇನಿತ್ತು ಅನ್ನೋದು ಅರ್ಥವಾಗುತ್ತಿಲ್ಲ. ಪ್ರತಿ ಪಂದ್ಯದಲ್ಲಿ ಹೊಸ ತಂಡ ಆಡುತ್ತಿದೆ. ತಂಡದಲ್ಲಿ ಯಾರೊಬ್ಬರೂ ಕಾಯಂ ಅಲ್ಲ. ಆಟಗಾರರ ಸ್ಥಾನ ಭದ್ರವಾಗದಿದ್ರೆ ಅವರ ಪ್ರದರ್ಶನ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ ಅಂತ ಹೇಳಿದ್ದಾರೆ. ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ರಹಾನೆ, ಪೂಜಾರ ಹಾಗೂ ಕೊಹ್ಲಿಯಂತಹ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆದ್ರೆ ಎರಡೂ ಇನಿಂಗ್ಸ್‌ಗಳಲ್ಲಿ 200ಕ್ಕೂ ಹೆಚ್ಚು ರನ್‌ಗಳಿಸಲು ಸಾಧ್ಯವಾಗಲಿಲ್ಲ. ಇದರರ್ಥ ನೀವು ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡಿಲ್ಲ ಅಂತ. ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. ನಾವು ಆಡತ್ತಿದ್ದಾಗ ಇದ್ದ ಪರಿಸ್ಥಿತಿಗೂ ಹಾಗೂ ಈಗಿರೋ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ತಂಡವನ್ನ ಕಟ್ಟುವಾಗ ಆಟಗಾರರಿಗೆ ವಿಶ್ವಾಸವನ್ನ ತುಂಬಬೇಕು. ತಂಡದಲ್ಲಿ ಪದೇಪದೆ ಬದಲಾವಣೆ ಮಾಡೋದ್ರಲ್ಲಿ ಯಾವದೇ ಅರ್ಥವಿಲ್ಲ. ಕೆ.ಎಲ್. ರಾಹುಲ್ ಫಾರ್ಮ್​ನಲ್ಲಿದ್ದರೂ ಹೊರಗೆ ಕೂತಿರೋದ್ರಲ್ಲಿ ಅರ್ಥವಿಲ್ಲ. ಫಾರ್ಮ್​ನಲ್ಲಿರೋ ಆಟಗಾರ ತಂಡದಲ್ಲಿರಬೇಕು’ ಅಂತ ಕಪಿಲ್ ದೇವ್ ಹೇಳಿದ್ದಾರೆ.

Contact Us for Advertisement

Leave a Reply