ರೌಡಿ ಶೀಟರ್‌ ಗೆ ಕೈ ಮುಗಿದು ಮೋದಿ ಪ್ರಧಾನಿ ಹುದ್ದೆಗೆ ಕಳಂಕ ತಂದಿದ್ದಾರೆ: ಕಾಂಗ್ರೆಸ್‌ ಆಕ್ರೋಶ!

masthmagaa.com:

ಚುನಾವಣೆ ಹತ್ತಿರದಲ್ಲಿರುವಾಗಲೇ ಪ್ರಧಾನಿ ಮೋದಿ‌ಯವರ ಫೋಟೋ ಒಂದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಬಿಜೆಪಿ ವಿರುದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‌ ನಾಯಕರು ಸಮರ ಸಾರಿದ್ದಾರೆ. ಮೋದಿಯವರು ನಿನ್ನೆ ರಾಜ್ಯಕ್ಕೆ ಆಗಮಿಸಿದ್ದ ಸಂಧರ್ಭದಲ್ಲಿ ರೌಡಿಶೀಟರ್‌ ಆರೋಪ ಹೊತ್ತಿರೋ ಫೈಟರ್‌ ರವಿಯ ಮುಂದೆ ನಮಸ್ಕಾರ ಮಾಡಿದ್ದ ಪೋಟೋ ವೈರಲ್‌ ಆಗಿತ್ತು. ಇದನ್ನೇ ಅಸ್ತ್ರವಾಗಿಟ್ಟುಕೊಂಡಿರೋ ಕಾಂಗ್ರೆಸ್‌, ಬಿಜೆಪಿ ವಿರುದ್ದ ಸಿಡಿದು ಬಿದ್ದಿದೆ. ಮೋದಿಯವರು ರೌಡಿ ಶೀಟರ್‌ಗೆ ನಮಸ್ಕಾರ ಮಾಡುವ ಮೂಲಕ ಪ್ರಧಾನಿ ಹುದ್ದೆಗೆ ಕಳಂಕ ತಂದಿದಾರೆ ಅಂತ ಆಕ್ರೋಶ ಹೊರಹಾಕಿದೆ. ಜೊತೆಗೆ , ನಾವು ಎಂದೂ ಯಾರ ಸಾವನ್ನು ಬಯಸುವುದಿಲ್ಲ. ಮೋದಿಯವರೇ ನೀವು ಆರೋಗ್ಯವಾಗಿರಿ. ದೀರ್ಘಾಯುಷಿ ಆಗಿರಿ. ಹಾಗೇನಾದರೂ ನಿಮಗೆ ತೊಂದರೆ ಆದರೆ ಅದಕ್ಕೆ ಇಂತಹ ರೌಡಿಶೀಟರ್ ಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ನಿಮ್ಮೆದುರು ತಂದು ನಿಲ್ಲಿಸುವ ನಿಮ್ಮ ಪಕ್ಷದವರೇ ಕಾರಣ. ಇಂತಹವರಿಂದ ಸಾಧ್ಯವಾದಷ್ಟು ದೂರವಿರಿ ಅಂತ ಸಲಹೆ ಕೊಟ್ಟಿದೆ. ಈ ಕಡೆ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಮಾತನಾಡಿ, ಮೋದಿಯವರು ಕ್ರಿಕೆಟ್‌ ಬೆಟ್ಟಿಂಗ್‌ ನಡೆಸ್ತಕ್ಕಂತ ವ್ಯಕ್ತಿಗೆ, ಅಂಡರ್‌ವಲ್ಡ್‌ ಡಾನ್‌ಗಳಿಗೆ ತಲೆಬಾಗಿ ಕೈಮುಗಿದಿದ್ದಾರೆ. ಬಿಜೆಪಿ ಈ ಪರಿಸ್ಥಿತಿಗೆ ತಲುಪಿರೋದು ನಾಚಿಕೆಗೇಡಿನ ವಿಚಾರ ಅಂತ ಬೆಂಕಿ ಉಗುಳಿದ್ದಾರೆ. ಇನ್ನು ಈ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿರೋ ಬಿಜೆಪಿ ನಾಯಕಿ ಶೋಭಾ ಕರಾಂದ್ಲಾಜೆ, ಪೈಟರ್‌ ರವಿ ಯಾರು ಅಂತ ಪ್ರಧಾನಿಗಳಿಗೆ ಗೊತ್ತಿಲ್ಲ. ಇದಕ್ಕೆ ಪ್ರಧಾನಿ ಅವರು ಜವಾಬ್ದಾರರಲ್ಲ. ಸ್ವಾಗತ ಪಟ್ಟಿಯಲ್ಲಿ ಆತನ ಹೆಸರು ಹೇಗೆ ಬಂತು ಪರಿಶೀಲನೆ ಮಾಡ್ತೀವಿ ಅಂತ ಹೇಳಿದ್ದಾರೆ.

Contact Us for Advertisement

Leave a Reply