ನೀತಿ ಸಂಹಿತೆ ಶುರುವಾದ ಬೆನ್ನಲ್ಲೆ 20 ಕೋಟಿ ಮೌಲ್ಯದ ವಸ್ತುಗಳ ವಶ!

masthmagaa.com:

ಲೋಕಸಭೆ ಎಲೆಕ್ಷನ್‌ ಸಂಬಂಧ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ರಾಜ್ಯದಲ್ಲಿ ಹಣ ಬಲ ಹೆಂಡದ ಬಲ ಹರಿದಾಡಲು ಶುರುವಾಗಿದೆ ಅನ್ನೊದು ಸಾಬೀತಾಗಿದೆ. ಇದೀಗ ನೀತಿ ಸಂಹಿತೆ ಜಾರಿಯಾಗಿ 73 ಗಂಟೆಗಳೊಳಗೆ ರಾಜ್ಯದಲ್ಲಿ ಮದ್ಯ, ಮಾದಕ ವಸ್ತುಗಳು ಹಾಗೂ ನಗದು ಸೇರಿದಂತೆ ಒಟ್ಟು 20 ಕೋಟಿ ಮೌಲ್ಯದ ವಸ್ತುಗಳನ್ನ ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಈ ಬಗ್ಗೆ ಸ್ವತಃ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಬಿ ಬಸವರಾಜು ಸ್ಪಷ್ಟನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply