ಬೆಂಗಳೂರು, ಬೆಳಗಾವಿಯಲ್ಲಿ ಕೊರೋನಾ ಲಸಿಕೆಯ ದೊಡ್ಡ ಗೋಡೌನ್!

masthmagaa.com:

ಜನವರಿ 16ನೇ ತಾರೀಖಿನಿಂದ ಆರಂಭವಾಗಲಿರುವ ಕೊರೋನಾ ಲಸಿಕೆಯ ಅಭಿಯಾನಕ್ಕೆ ರಾಜ್ಯ ಸರ್ಕಾರ ಕೂಡ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಸರ್ಕಾರ ಕಳಿಸಿಕೊಡುವ ಲಸಿಕೆಯ ಡೋಸ್​ಗಳನ್ನ ಶೇಖರಿಸಿಡಲು ಬೆಂಗಳೂರು ಮತ್ತು ಬೆಳಗಾವಿ, ಈ ಎರಡು ಕಡೆ ದೊಡ್ಡ ದಾಸ್ತಾನು ವ್ಯವಸ್ಥೆ ಇದೆ. ಉಳಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ಟೋರೇಜ್ ಫೆಸಿಲಿಟಿ ಇದೆ. ಲಸಿಕೆ ಅಭಿಯಾನಕ್ಕೆ ನಾವು ಸಕಲ ರೀತಿಯಲ್ಲೂ ಸಿದ್ಧವಾಗಿದ್ದು ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ಸೂಚನೆಗಳಿಗೆ ಕಾಯ್ತಿದ್ದೇವೆ ಅಂತ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಅಂದ್ಹಾಗೆ ದೇಶದಲ್ಲಿ ಪುಣೆಯು ಲಸಿಕೆಯ ಸೆಂಟ್ರಲ್ ಹಬ್ ರೀತಿ ಕೆಲಸ ಮಾಡುತ್ತೆ. ಇಲ್ಲಿಂದಲೇ ವಿವಿಧ ಭಾಗಗಳಲ್ಲಿರುವ ಮಿನಿ ಹಬ್​ಗಳಿಗೆ, ಅಲ್ಲಿಂದ ರಾಜ್ಯಗಳಿಗೆ ಲಸಿಕೆ ಪೂರೈಕೆ ಆಗುತ್ತೆ. ದಕ್ಷಿಣ ಭಾರತಕ್ಕೆ ಹೈದ್ರಾಬಾದ್ ಮತ್ತು ಚೆನ್ನೈ ಮಿನಿ ಹಬ್​ಗಳ ರೀತಿ ಕೆಲಸ ಮಾಡುತ್ತವೆ.

-masthmagaa.com

Contact Us for Advertisement

Leave a Reply