ಬಿಬಿಎಂಪಿ ಚುನಾವಣೆಗೆ ಡೆಡ್‌ಲೈನ್‌ ನೀಡಿದ ಹೈ ಕೋರ್ಟ್‌!

masthmagaa.com:

ಬಿಬಿಎಂಪಿ ಚುನಾವಣೆಯನ್ನ ಡಿಸೆಂಬರ್ 31 ರೊಳಗೆ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ಮಾಡಿದೆ. ಅಲ್ದೇ ಮೀಸಲಾತಿ ಪಟ್ಟಿ ಸರಿಪಡಿಸಿ ಪ್ರಕಟ ಮಾಡೋಕೆ ನವೆಂಬರ್ 30 ರವರೆಗೆ ಕಾಲಾವಕಾಶ ನೀಡಿದೆ. ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲದೆ 2 ವರ್ಷ ಕಳೆದಿದ್ದರೂ ಸರ್ಕಾರ ಚುನಾವಣೆ ಮುಂದೂಡುತ್ತಲೇ ಬಂದಿತ್ತು. ವಾರ್ಡ್ ಪುನರ್ ವಿಂಗಡಣೆ, ವಿಸ್ತರಣೆ, ಮೀಸಲಾತಿ ಕಾರಣಗಳನ್ನು ನೀಡಿ ಚುನಾವಣೆ ನಡೆಸಿರಲಿಲ್ಲ. ಇದೀಗ ಕೋರ್ಟ್‌ ಇದಕ್ಕೆ ಚಾಟಿ ಬೀಸಿ ಚುನಾವಣೆ ನಡೆಸೋದಕ್ಕೆ ಡೆಡ್‌ ಲೈನ್‌ ನೀಡಿದೆ.

-masthmagaa.com

Contact Us for Advertisement

Leave a Reply