ಯುದ್ಧ ನಿಲ್ಲಿಸೋಕೆ ನೆಹರುಗೆ ಸೇನಾಧಿಕಾರಿ ಪತ್ರ! ಬ್ರಿಟನ್‌ ಮಾಧ್ಯಮ ಹೊರಹಾಕಿದೆ ಸ್ಪೋಟಕ ಮಾಹಿತಿ!

masthmagaa.com:

ಕಾಶ್ಮೀರ ವಿಚಾರದಲ್ಲಿ ನೆಹರು ತಪ್ಪು ಮಾಡಿದ್ರು. ವಿಶ್ವಸಂಸ್ಥೆಗೆ ಹೋಗಿ ಕಾಶ್ಮೀರವನ್ನ ಕಳೆದುಕೊಂಡ್ರು ಅಂತ ಆರೋಪ ಏನಿದೆ ಇದಕ್ಕೆ ಸಂಬಂಧಪಟ್ಟಂತೆ ಬ್ರಿಟನ್‌ನ ಮಾಧ್ಯಮವೊಂದು ಸ್ಪೋಟಕ ವಿಚಾರ ಹೊರಹಾಕಿದೆ. 1948ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಕಾಶ್ಮೀರಕ್ಕಾಗಿ ನಡೆದ ಯುದ್ದದಲ್ಲಿ ನೆಹರು ಅವರಿಗೆ ಸೇನೆಯಿಂದಲೇ ಮಾರ್ಗದರ್ಶನ ಬಂದಿತ್ತು. ಆ ಒಬ್ಬ ಸೇನಾ ಅಧಿಕಾರಿಯ ಮಾತುಕೇಳಿ ನೆಹರು ಪಾಕಿಸ್ತಾನದ ಜೊತೆಗೆ ಸೀಜ್‌ಫೈರ್‌ಗೆ ಮುಂದಾದ್ರು. ಕಾಶ್ಮೀರ ವಿಚಾರ ವಿಶ್ವಸಂಸ್ಥೆಗೆ ಹೋಗೋಕೆ ಆ ಅಧಿಕಾರಿಯೂ ಕಾರಣ ಅಂತ ಯುರೋಪಿನ ಅತ್ಯಂತ ಹಳೆಯ ಪತ್ರಿಕೆಗಳನ್ನ ಒಂದಾದ `ದಿ ಗಾರ್ಡಿಯನ್‌’ ವರದಿ ಮಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಲವು ರಹಸ್ಯ ದಾಖಲೆಗಳು ತಮಗೆ ಸಿಕ್ಕಿವೆ ಅಂತ ಈ ಪತ್ರಿಕೆ ಹೇಳಿಕೊಂಡಿದೆ. ಆ ಅಧಿಕಾರಿ ಯಾರು ಅಂದ್ರೆ ಭಾರತದ ಎರಡನೇ ಕಮಾಂಡರ್‌ ಇನ್‌ ಚೀಫ್ Gen Sir Francis Robert Roy Bucher ಅಂತ ಆ ವರದಿ ತಿಳಿಸಿದೆ. ಯುದ್ದ ನಡೀತಿದ್ದ ಸಂಧರ್ಭದಲ್ಲಿ ಭಾರತದ ಕಮಾಂಡರ್‌ ಇನ್‌ ಚೀಫ್‌ ಆಗಿದ್ದ ಈ ಬುಚರ್‌ ಅವರು ನೆಹರು ಅವರಿಗೆ 1948 ನವೆಂಬರ್‌ 28ರಂದು ಒಂದು ಪತ್ರ ಬರೆದಿದ್ರು. ಅದ್ರಲ್ಲಿ ತಮ್ಮ ಸೇನೆ ದೀರ್ಘಾಕಾಲ ಯುದ್ದರಂಗದಲ್ಲಿ ಇರೋಕೆ ಸಾಮಾರ್ಥ್ಯ ಹೊಂದಿಲ್ಲ. ಯುದ್ದ ಶುರುವಾಗಿ ಈಗಾಗಲೇ 13 ತಿಂಗಳುಗಳು ಉರುಳಿವೆ. ಭಾರತೀಯ ಸೈನಿಕರಿಗೆ ತರಬೇತಿಯ ಕೊರತೆ ಇದೆ. ಅವರಿಗೆ ರೆಸ್ಟ್ ಕೂಡ ಬೇಕಿದೆ. ಅಂತ ನೆಹರು ಅವರಿಗೆ ಈ ಸೇನಾ ಮುಖ್ಯಸ್ಥರು ಸಲಹೆ ಕೊಟ್ಟಿದ್ರು ಅಂತ ಉಲ್ಲೇಖ ಮಾಡಲಾಗಿದೆ. ಇದಕ್ಕೆ ನೆಹರು ಅವರು ಪ್ರತಿಕ್ರಿಯಿಸಿ ಭಾರತದ ಮೇಲೆ ಪಾಕಿಸ್ತಾನ ಈ ವಾರದಲ್ಲೇ ವಾಯುದಾಳಿ ಮಾಡುವ ಯೋಜನೆ ಹಾಕೊಂಡಿದೆ, ಪಾಕಿಸ್ತಾನ ರಸ್ತೆ ನಿರ್ಮಾಣ ಮಾಡ್ತಿದೆ, ಅವರು ಅಡ್ವಾನ್ಸಡ್‌ ಪೊಸಿಸನ್‌ನಲ್ಲಿ ಇದ್ದಾರೆ ಅಂತ ಬರ್ತಿರೋ ಮಾಹಿತಿಯಿಂದ ನಾನು ಕಳವಳಗೊಂಡಿದ್ದೀನಿ ಅಂತ ನೆಹರು ಹೇಳಿದ್ರು ಅಂತ ಈ ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ ಡಿಸೆಂಬರ್‌ 23ರಂದು ನೆಹರು ಸೇನಾ ಮುಖ್ಯಸ್ಥರಿಗೆ ಮತ್ತೊಂದು ಪತ್ರ ಬರೆದಿದ್ರು. ಅದ್ರಲ್ಲಿ ಪಾಕಿಸ್ತಾನವನ್ನ ನಾವು ನಂಬೋಕೆ ಆಗೋಲ್ಲ. ನಾವು ರಕ್ಷಣಾತ್ಮಕವಾಗಿ ಯುದ್ದ ಮಾಡಿದ್ರೆ ಅಂದ್ರೆ ನಮ್ಮ ಪಾಡಿಗೆ ನಾವು ಇದ್ದುಕೊಂಡು ಪಾಕಿಸ್ತಾನದವರು ದಾಳಿ ಮಾಡ್ತಾರೆ ಅಂತ ಅಂತ ಕೂತಿದರೆ ಅವರು ಮುಂದುವರೆಯಬೋದು. ಹಾಗೊಂದು ವೇಳೆ ಪಾಕಿಸ್ತಾನ ನಿರಂತರ ಶೆಲ್ ದಾಳಿ ಮತ್ತು ಆಕ್ರಮಣಕಾರಿ ಕಾರ್ಯಾಚರಣೆಯನ್ನು ಮುಂದುವರೆಸಿದರೆ, ಅದನ್ನು ಚೆಕ್‌ ಮಾಡೋಕೆ ನಮಗೆ ಸಾಧ್ಯವಾಗದಿದ್ದರೆ, ಯುದ್ದ ಅನಿವಾರ್ಯವಾಗುತ್ತೆ. ಆಗ ಯುದ್ದ ಮಾಡಲೇಬೇಕಾಗುತ್ತೆ ಅಂತ ನೆಹರು ಅವರು ಸೇನಾ ಮುಖ್ಯಸ್ಥ ಬುಚರ್‌ಗೆ ಬರೆದಿದ್ರು. ಇದಕ್ಕೂ ಪ್ರತಿಕ್ರಿಯಿಸಿರೋ ಸೇನಾ ಮುಖ್ಯಸ್ಥ ಬುಚರ್‌, ಪಾಕಿಸ್ತಾನ ರಸ್ತೆ ಮಾಡೋದನ್ನ ಅಥವಾ ಅವರನ್ನ ತಡೆಯೋದನ್ನ ಮಾಡೋಕೆ ನಮ್ಮ ಕೈಯಲ್ಲಿ ಆಗಲ್ಲ. ಸೈನಿಕರು ಈಗಾಗಲೇ ಸುಸ್ತಾಗಿದ್ದಾರೆ. ಅದರ ಬದಲು ರಾಜಕೀಯ ಮಾರ್ಗ ಕಂಡುಕೊಳ್ಳೋದು ಉತ್ತಮ ಅಂತ ಸೇನಾ ಮುಖ್ಯಸ್ಥರು ನೆಹರುಗೆ ಸಲಹೆ ಕೊಟ್ಟಿದ್ರು ಅಂತ ಗಾರ್ಡಿಯನ್‌ ವರದಿ ಮಾಡಿದೆ.

ಈ ಮಾಹಿತಿ ಜನರಲ್‌ ಬುಚರ್‌ರ ಪತ್ರಗಳಿಂದ ಗೊತ್ತಾಗಿದೆ ಅಂತ ಗಾರ್ಡಿಯನ್‌ ಹೇಳಿದೆ. ಅಂದ್ಹಾಗೆ ʻಬುಚರ್‌ ಪೇಪರ್ಸ್‌ʼ ಅಂತಲೇ ಕರೆಯಲಾಗೋ ಈ ಪತ್ರಗಳು ಭಾರತದಲ್ಲಿ ಕ್ಲಾಸಿಫೈಡ್‌ ಆಗಿದ್ದು, ನೆಹರೂ ಮೆಮೋರಿಯಲ್‌ ಮ್ಯೂಸಿಯಂ ಅಂಡ್‌ ಲೈಬ್ರರಿಯಲ್ಲಿ ಇವೆ. ಆದ್ರೆ ಕೆಲ ಪತ್ರಗಳು ಲಂಡನ್‌ನ ನ್ಯಾಷನಲ್‌ ಆರ್ಮಿ ಮ್ಯೂಸಿಯಂನಲ್ಲಿ ಕೂಡ ಇವೆ. ಈ ಹಿಂದೆ ವೆಂಕಟೇಶ್‌ ನಾಯಕ್‌ ಅನ್ನೋ RTI ಕಾರ್ಯಕರ್ತರು ಈ ಪತ್ರಗಳನ್ನ ಡಿಕ್ಲಾಸಿಫೈ ಮಾಡ್ಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದ್ರು. ಆದ್ರೆ 2021ರಲ್ಲಿ ಸರ್ಕಾರ ರಾಷ್ಟ್ರದ ಹಿತದಲ್ಲಿ ಇದನ್ನ ಬಹಿರಂಗ ಮಾಡೋಕಾಗಲ್ಲ ಅಂತ ಹೇಳಿತ್ತು. ಇನ್ನು 12 ಅಕ್ಟೋಬರ್‌ 2022ರಲ್ಲಿ ನೆಹರೂ ಮ್ಯೂಸಿಯಂನ ಚೇರ್ಮನ್‌ ನೃಪೇಂದ್ರ ಮಿಶ್ರಾ ಅವ್ರು, ಈ ಪತ್ರಗಳನ್ನ ನಾವು ಓದಿದ್ದೇವೆ, ಅದ್ಯಯನ ವಿಚಾರದಲ್ಲಿ ಈ ಪತ್ರಗಳು ತುಂಬ ಮಹತ್ವದ್ದಾಗಿದೆ, ಹೀಗಾಗಿ ಇವನ್ನ ಡಿಕ್ಲಾಸಿಫೈ ಮಾಡ್ಬೇಕು ಅಂತ ವಿದೇಶಾಂಗ ಕಾರ್ಯದರ್ಶಿಗೆ ಪತ್ರ ಬರೆದಿದ್ರು ಅಂತ ಗಾರ್ಡಿಯನ್‌ ಹೇಳಿದೆ. ಆದ್ರೆ ಫಾರೆನ್‌ ಸೆಕ್ರಟರಿ, ಪೇಪರ್‌ಗಳನ್ನ ಪರಿಶೀಲಿಸುವ ಕಾರ್ಯವನ್ನ ತಕ್ಷಣವೇ ನಿಲ್ಲಿಸಬೇಕು. ಬುಚರ್‌ ಪೇಪರ್ಸ್‌ನ ಸೆನ್ಸಿಟಿವಿಟಿ ಬಗ್ಗೆ ಇನ್ನಷ್ಟು ಪರಿಶೀಲನೆ ಮಾಡ್ಬೇಕು ಅಂತ ಹೇಳಿದ್ರಂತೆ. ಸಾಮಾನ್ಯವಾಗಿ ಭಾರತ ಈ ರೀತಿ ಕ್ಲಾಸಿಫೈಡ್‌ ದಾಖಲೆಗಳನ್ನ 25 ವರ್ಷಗಳ ನಂತ್ರ ಬಹಿರಂಗಗೊಳಿಸುತ್ತೆ. ಆದ್ರೆ ಕೆಲವು ದಾಖಲೆಗಳು ಇನ್ನೂ ಕ್ಲಾಸಿಫೈಡ್‌ ಆಗಿಯೇ ಉಳಿದಿವೆ.

-masthmagaa.com

Contact Us for Advertisement

Leave a Reply