ಮಾಜಿ ಪ್ರೇಯಸಿ ವಿರುದ್ಧ ಕೇಸ್‌ ದಾಖಲಿಸಿದ ಕ್ರಿಕೆಟಿಗ ಕೆಸಿ ಕಾರ್ಯಪ್ಪ!

masthmagaa.com:

ಕರ್ನಾಟಕದ ಕ್ರಿಕ್ರೆಟಿಗ ಕೆ.ಸಿ. ಕಾರಿಯಪ್ಪ ಅವ್ರು ತನ್ನ ಎಕ್ಸ್‌-ಲವರ್‌… ಮಾಜಿ ಪ್ರೇಯಸಿ ತನಗೆ ಬೆದರಿಕೆ ಹಾಕಿದ್ದಾಳೆ ಅಂತ ಇದೀಗ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ʻನಾನು ಮತ್ತು ನನ್ನ ಕುಟುಂಬದವ್ರು ಗಂಭೀರ ಪರಿಣಾಮಗಳನ್ನ ಎದುರಿಸ್ಬೇಕಾಗುತ್ತೆ ಅಂತ ಬೆದರಿಕೆ ಹಾಕಿದ್ದಾರೆ. ಹಾಗೆ ನನ್ನ ವೃತ್ತಿ ಜೀವನ ಎಂಡ್‌ ಮಾಡ್ತೀನಿ ಅಂತೇಳಿ ನನ್ನ ಮಾಜಿ ಪ್ರೇಯಸಿ ಹೆದರಿಸಿದ್ದಾರೆ.ʼ ಅಂತ ಕೆ ಸಿ ಕಾರ್ಯಪ್ಪ ಆರೋಪಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ಆರ್‌.ಟಿ. ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರೋದು ವರದಿಯಾಗಿದೆ. ಪ್ರಕರಣ ಕೈಗೆತ್ತುಕೊಂಡಿರೋ ಪೊಲೀಸರು ತನಿಖೆ ಶುರುಮಾಡಿದ್ದಾರೆ.

-masthmagaa.com

Contact Us for Advertisement

Leave a Reply