7.2 ಕೋಟಿಗೆ ಕೆಜಿಎಫ್ 2 ಚಿತ್ರದ ಆಡಿಯೋ ಹಕ್ಕುಗಳು ಮಾರಾಟ !!

masthmagaa.com:

‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಹಾಡಿನ ಹಕ್ಕುಗಳು ಈ ಹಿಂದೆ ‘ಲಹರಿ ಮ್ಯೂಸಿಕ್​’  ಆಡಿಯೋ ಸಂಸ್ತೆಯ ಪಾಲಾಗಿತ್ತು. ಮೂಲಗಳ ಪ್ರಕಾರ, ಆಗ 3.60 ಕೋಟಿಗೆ ವ್ಯವಹಾರ ಕುದುರಿತ್ತು. ಆದರೆ ಈಗ ಅದಕ್ಕಿಂತಲೂ ದುಪ್ಪಟ್ಟ ಹಣ ನೀಡಿ ‘ಕೆಜಿಎಫ್​: ಚಾಪ್ಟರ್​ 2’ ಆಡಿಯೋವನ್ನು ಲಹರಿ ಸಂಸ್ಥೆ ಖರೀದಿಸಿದೆ. ಈ ಬಗ್ಗೆ ಲಹರಿ ಆಡಿಯೋ ಕಂಪನಿಯ ಮಾಲೀಕ ಲಹರಿ ವೇಲು ಕೊಟ್ಟಿರುವ ಮಾಹಿತಿ ಪ್ರಕಾರ 7 ಕೋಟಿ 20 ಲಕ್ಷ್ಸಕ್ಕೆ ಕೆಜಿಎಫ್  ಚಾಪ್ಟರ್ 2 ಚಿತ್ರದ ಆಡಿಯೋ ರೈಟ್ಸ್​ ಮಾರಾಟ ಆಗಿದೆ ಎಂಬ ವಿಷಯವನ್ನ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾ ಒಂದರ ಆಡಿಯೋ ಹಕ್ಕುಗಳು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ಕೆಜಿಎಫ್ ಚಾಪ್ಟರ್ 2 ಸಿನಿಮಾ ಈ  ಬಾಹುಬಲಿ 1 ಮತ್ತು 2  ಸಿನಿಮಾಗಳನ್ನ ಹಿಂದಿಕ್ಕಿ ದಾಖಲೆ ಬರೆದಿದೆ.

Contact Us for Advertisement

Leave a Reply