ಪುಟಿನ್‌ ಉಡುಗೊರೆಯಾಗಿ ನೀಡಿದ್ದ ಕಾರ್‌ ಓಡಿಸಿದ ಕಿಮ್‌ ಜಾಂಗ್‌!

masthmagaa.com:

ದಿನಕಳೆದಂತೆ ರಷ್ಯಾ ಮತ್ತು ನಾರ್ತ್‌ ಕೊರಿಯಾದ ಸಂಬಂಧ ಬಹಳ ಆಳವಾಗ್ತಾ ಹೋಗ್ತಿದೆ. ಕಳೆದ ತಿಂಗಳಷ್ಟೇ ರಷ್ಯಾಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಾರ್ತ್‌ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವ್ರಿಗೆ ರಷ್ಯಾದ ಐಷಾರಾಮಿ ((ಲಿಮೊನೀಸ್‌)) ಕಾರ್‌ನ್ನ ಗಿಫ್ಟ್‌ ಮಾಡಿದ್ರು. ಇದೀಗ ಈ ಬಗ್ಗೆ ಕಿಮ್ಮಣ್ಣನ ಸಹೋದರಿ ಕಿಮ್‌ ಯೋ-ಜಾಂಗ್‌ ರಿಯಾಕ್ಟ್‌ ಮಾಡಿದ್ದಾರೆ. ಪುಟಿನ್‌ ನೀಡಿರೋ ಕಾರ್‌ನ್ನ ಹಾಡಿ ಹೊಗಳಿದ್ದಾರೆ. ʻಕಾರ್‌ನ ಸ್ಪೆಷಲ್‌ ಫಂಕ್ಷನ್‌ ಪರ್ಫೆಕ್ಟ್‌ ಆಗಿದೆ ಮತ್ತಿದನ್ನ ಸಂಪೂರ್ಣವಾಗಿ ನಂಬಬೋದು. ಕಿಮ್‌ ಜಾಂಗ್‌ ಉನ್‌ ಅವ್ರು ಈ ಕಾರ್‌ನ್ನ ಯೂಸ್‌ ಮಾಡ್ತಿದ್ದಾರೆ. ಇದು ರಷ್ಯಾ ಮತ್ತು ನಾರ್ತ್‌ ಕೊರಿಯಾ ಗೆಳೆತನದ ಪ್ರೂಫ್‌ ಆಗಿದೆ. ಉಭಯ ದೇಶಗಳ ಈ ಗೆಳೆತನ ಸಮಗ್ರವಾಗಿ ಬೆಳೀತಿದೆʼ ಅಂತೇಳಿದ್ದಾರೆ

-masthmagaa.com

Contact Us for Advertisement

Leave a Reply