ಮೊದಲ ಬಾರಿಗೆ ಚಳಿಗಾಲದಲ್ಲಿ ಆರ್ಕ್ಟಿಕ್‌ಗೆ ಭಾರತದ ಎಂಟ್ರಿ!

masthmagaa.com:

ಉತ್ತರ ಧ್ರುವದ ಬಳಿ ಇರೋ ಆರ್ಕ್ಟಿಕ್‌ ವೃತ್ತ ಪ್ರದೇಶದಲ್ಲಿನ ವಾರ್ಷಿಕ ವಿಸಿಟ್‌ಗೆ ಹೋಗೋಕೆ ಭಾರತದ ವಿಜ್ಞಾನಿಗಳ ತಂಡ ರೆಡಿಯಾಗಿದೆ. ಹಾಗಂತ ಕೇಂದ್ರ ಭೂವಿಜ್ಞಾನಗಳ ಸಚಿವ ಕಿರೇನ್‌ ರಿಜಿಜು ಹೇಳಿದ್ದಾರೆ. ವಿಶೇಷ ಏನಪ್ಪ ಅಂದ್ರೆ ಇದೇ ಮೊದಲ ಬಾರಿಗೆ ಚಳಿಗಾಲದಲ್ಲಿ ಭಾರತ ಈ ಅಧ್ಯಯನ ಕೈಗೊಂಡಿದೆ. 2008ರಲ್ಲೆ ನಾರ್ವೆಯ ಸ್ವಾಲ್‌ಬಾರ್ಡ್‌ ರಾಜ್ಯದ Ny-Alesund ಪ್ರದೇಶದಲ್ಲಿ ʻಹಿಮಾದ್ರಿʼ ಅನ್ನೋ ಶಾಶ್ವತ ಅಧ್ಯಯನ ಕೇಂದ್ರವನ್ನ ಭಾರತ ಸ್ಥಾಪಿಸಿದೆ. ಇದ್ರಲ್ಲಿ ವರ್ಷ ಪೂರ್ತಿ ಇದ್ದು ರಿಸರ್ಚ್‌ ಮಾಡೋಕೆ ವಿಜ್ಞಾನಿಗಳು ರೆಡಿಯಾಗಿದ್ದಾರೆ. ಈ ಅಧ್ಯಯನದ ಬಗ್ಗೆ ವಿಜ್ಞಾನಿಯೊಬ್ರು ಮಾತನಾಡಿ, ʻಆರ್ಕ್ಟಿಕ್‌ ಪ್ರದೇಶ ಬಿಸಿಯಾಗ್ತಿರೋದ್ರ ಪರಿಣಾಮಗಳನ್ನ ಈಗಾಗ್ಲೆ ಭಾರತ ಸೇರಿ ಎಲ್ಲಾ ದೇಶಗಳು ಫೇಸ್‌ ಮಾಡ್ತಿವೆ. ಈ ಭಾಗದಲ್ಲಿ ತಾಪಮಾನ ಜಾಸ್ತಿಯಾದ್ರೆ ಅರಬ್ಬೀ ಸಮುದ್ರದ ಸೈಕ್ಲೋನ್‌ಗಳ ತೀವ್ರತೆ ಹೆಚ್ಚಾಗುತ್ತೆ ಅನ್ನೋದು ಅಧ್ಯಯನಗಳಿಂದ ತಿಳಿದು ಬಂದಿದೆ. ಹಾಗಾಗಿ ಈ ಭಾಗದ ರಿಸರ್ಚ್‌ ಮಾಡೋದು ಬಹಳ ಕ್ರೂಷಿಯಲ್‌ʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply