ಶ್ರೀಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನ ಹೈಕೋರ್ಟ್‌ಗೆ ವರ್ಗಾಯಿಸಿ: ಅಲಹಾಬಾದ್‌ ಹೈಕೋರ್ಟ್‌

masthmagaa.com:

ಶ್ರೀಕೃಷ್ಣ ಜನ್ಮಭೂಮಿ ಹಾಗೂ ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿ ಮಥುರಾ ಕೋರ್ಟ್‌ನಲ್ಲಿರುವ ಎಲ್ಲಾ ಅರ್ಜಿಗಳನ್ನ ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಉತ್ತರ ಪ್ರದೇಶದ ಹೈಕೋರ್ಟ್‌ ಆದೇಶ ನೀಡಿದೆ. ಇದು ಹಿಂದೂಗಳು ಹಾಗೂ ಮುಸ್ಲಿಂರ ನಂಬಿಕೆ ವಿಷಯ. ಹೀಗಾಗಿ ಕೆಳಹಂತದ ಕೋರ್ಟ್‌ನಲ್ಲಿಯೇ ಈ ಅರ್ಜಿಗಳ ವಿಚಾರಣೆ ಕಂಟಿನ್ಯೂ ಆದ್ರೆ ಕೇಸ್‌ ಇತ್ಯರ್ಥ ಮಾಡೋಕೆ ಲೇಟ್‌ ಆಗ್ಬೋದು ಅಂತ ಕೋರ್ಟ್‌ ಹೇಳಿದೆ. ಅಂದ್ಹಾಗೆ ಈ ಕೇಸ್‌ಗೆ ಸಂಬಂಧಿಸಿದಂತೆ ಒಟ್ಟು 7 ಅರ್ಜಿಗಳು ಮಥುರಾ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿವೆ.

-masthmagaa.com

Contact Us for Advertisement

Leave a Reply