ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ಕೃತಿ ಸನೋನ್‌ !

masthmagaa.com:

ಆದಿಪುರುಷ್‌ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕೃತಿ ಸನೋನ್‌ ಈಗ ತಮ್ಮ ಹೊಸ ನಿರ್ಮಾಣ ಸಂಸ್ಥೆಯೊಂದನ್ನ ಶುರು ಮಾಡಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಈ ಸುದ್ದಿ ಶೇರ್ ಮಾಡಿದ ನಟಿ ತಾವು ನಿರ್ಮಾಣ ಸಂಸ್ಥೆ ಶುರು ಮಾಡಿದ್ದಾಗಿ ಹೇಳಿದ್ದಾರೆ. ಬ್ಲೂ ಬಟರ್​​​ಫ್ಲೈ ಫಿಲ್ಮ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದಾರೆ.ಈಗ ಗೇರ್ ಚೇಂಜ್ ಮಾಡುವ ಸಮಯ ಬಂದಿದೆ ಅಂತ ಹೇಳಿದ್ದಾರೆ.

“ನಾನು ಈ ಮ್ಯಾಜಿಕಲ್ ಇಂಡಸ್ಟ್ರಿಯಲ್ಲಿ 9 ವರ್ಷಗಳಿಂದ ನನ್ನ ಕನಸನ್ನು ಜೀವಿಸಿದ್ದೇನೆ. ನಾನು ಸಣ್ಣ ಹೆಜ್ಜೆ ಇಟ್ಟು ಬಂದು ಕಲಿತಿದ್ದೇನೆ. ನಾನು ಈಗ ಏನಾಗಿದ್ದೇನೋ ಹಾಗೆ ಬೆಳೆದಿದ್ದೇನೆ. ಸಿನಿಮಾ ಮಾಡುವ ಪ್ರತಿ ಹಂತವೂ, ಕೆಲಸವೂ ನನಗೆ ಇಷ್ಟ. ಈಗ ಮತ್ತಷ್ಟು ಮಾಡುವ ಸಮಯ ಬಂದಿದೆ. ಮತ್ತಷ್ಟು ಕಲಿಯಲು, ಮತ್ತಷ್ಟು ಕೆಲಸ ಮಾಡುವ ಸಮಯ ಬಂದಿದೆ. ನನ್ನ ಮನಸು ಮುಟ್ಟುವ ಮತ್ತಷ್ಟು ಕಥೆ ಹೇಳುವ ಸಮಯ ಬಂದಿದೆ. ನಿರ್ಮಾಪಕಿಯಾಗಿ ಹೊಸ ಜರ್ನಿ ಶುರು ಮಾಡಿದ್ದಾರೆ ಕೃತಿ. ಬ್ಯೂ ಬಟರ್​​ಫ್ಲೈ ಫಿಲ್ಮ್ಸ್​ ಶುರು ಮಾಡಲು ಎಕ್ಸೈಟ್ ಆಗಿದ್ದೇನೆ. ದೊಡ್ಡ ಕನಸುಗಳೊಂದಿಗೆ ಇದು ಶುರುವಾಗಿದೆ” ಅಂತ ಕ್ಯಾಪ್ಷನ್‌ ಕೂಡ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply