ಲಖೀಂಪುರ್ ಹಿಂಸಾಚಾರ: ಇವತ್ತು ಏನೇನಾಯ್ತು..? ಕಂಪ್ಲೀಟ್ ಡೀಟೈಲ್ಸ್​​​

masthmagaa.com:

ಲಖೀಂಪುರ್​​ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ವಿಚಾರಣೆಗೆ ಹಾಜರಾಗಿಲ್ಲ. ಇವತ್ತು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಬೇಕು ಅಂತ ಉತ್ತರ ಪ್ರದೇಶ ಪೊಲೀಸರು ಅಜಯ್ ಮಿಶ್ರಾ ಮನೆ ಮುಂದೆನೂ ನೋಟಿಸ್ ಅಂಟಿಸಿದ್ರು. ಆದ್ರೂ ಆಶಿಶ್ ಮಿಶ್ರಾ ಕ್ಯಾರೆ ಎಂದಿಲ್ಲ. ಹೀಗಾಗಿ ಪೊಲೀಸರು ಇವತ್ತು ಅವರ ಮನೆ ಮುಂದೆ ಮತ್ತೊಂದು ನೋಟಿಸ್ ಅಂಟಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಅಜಯ್ ಮಿಶ್ರಾ, ನನ್ನ ಮಗ ಆಶಿಶ್ ಮಿಶ್ರಾಗೆ ಹುಷಾರಿಲ್ಲ. ನಿರಪರಾಧಿ.. ನಾಳೆ ವಿಚಾರಣೆಗೆ ಹಾಜರಾಗಿ, ಸ್ಟೇಟ್ಮೆಂಟ್ ನೀಡ್ತಾನೆ. ಆತ ನಿರಪರಾಧಿ ಅನ್ನೋದಕ್ಕೆ ಆತನ ಬಳಿ ಸಾಕ್ಷ್ಯವಿದೆ ಅಂತ ಹೇಳಿದ್ದಾರೆ.

ಅಂದಹಾಗೆ ನಿನ್ನೆ ರಾತ್ರಿ ಪ್ರಕರಣ ಸಂಬಂಧ ಲವ್​ ಕುಶ್ ಮತ್ತು ಆಶಿಶ್ ಪಾಂಡೆ ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ. ಇವರಿಬ್ಬರು ಘಟನೆ ವೇಳೆ ಕಾರಿನಲ್ಲಿದ್ರು ಅನ್ನೋ ಆರೋಪ ಇದೆ.

ಇನ್ನು ಈ ಬಗ್ಗೆ ಇವತ್ತು ಕೂಡ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಈವರೆಗೆ ತೆಗೆದುಕೊಂಡ ಕ್ರಮಗಳು ನಮಗೆ ತೃಪ್ತಿ ನೀಡಿಲ್ಲ. ನೀವು ಯಾವ ರೀತಿಯ ಸಂದೇಶ ರವಾನಿಸೋಕೆ ಯತ್ನಿಸ್ತಿದ್ದೀರಿ..? ಬೇರೆ ಪ್ರಕರಣಗಳಲ್ಲಿ ಪೊಲೀಸರು ಕೂಡಲೇ ಆರೋಪಿಗಳನ್ನು ಅರೆಸ್ಟ್ ಮಾಡ್ತಾರೋ ಇಲ್ವೋ.. ಬೇರೆ ಆರೋಪಿಗಳನ್ನು ಹೇಗೆ ಟ್ರೀಟ್ ಮಾಡ್ತಿರೋ ಅದೇ ರೀತಿ ಈ ಪ್ರಕರಣದ ಆರೋಪಿಗಳನ್ನೂ ಟ್ರೀಟ್ ಮಾಡಿ.. ಬರೀ ನಾಲ್ವರು ರೈತ್ರು ಮಾತ್ರ ಅಲ್ಲ.. 8 ಮಂದಿಯ ಹತ್ಯೆ ಆರೋಪಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಅಂತ ಮುಖ್ಯ ನ್ಯಾಯಮೂರ್ತಿ ಎನ್​​ವಿ ರಮಣ ಚಾಟಿ ಬೀಸಿದ್ದಾರೆ. ಈ ವೇಳೆ ಸರ್ಕಾರ ಪರ ವಕೀಲ ಹರೀಶ್ ಸಾಳ್ವೆ ಕೂಡ, ಪೊಲೀಸರು ತೆಗೆದುಕೊಂಡಿರೋ ಕ್ರಮ ಸಾಕಾಗಿಲ್ಲ ಅಂತ ಒಪ್ಪಿಕೊಂಡಿದ್ದಾರೆ.

ಹಿಂಸಾಚಾರಕ್ಕೆ ಕಾರಣವಾದ ಎಲ್ಲಾ ಆರೋಪಿಗಳನ್ನು ಅರೆಸ್ಟ್ ಮಾಡದೇ ಇದ್ರೆ ಪ್ರಧಾನಿ ಮೋದಿ ಮನೆಗೆ ಮುತ್ತಿಗೆ ಹಾಕ್ತೀವಿ ಅಂತ ಆಜಾದ್ ಸಮಾಜ್ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply