39 ವರ್ಷಗಳ ಬಳಿಕ ಸ್ಫೋಟಗೊಂಡ ಅತ್ಯಂತ ದೊಡ್ಡ ಜ್ವಾಲಾಮುಖಿ! ಎಲ್ಲಿ?

masthmagaa.com:

ಅಮೆರಿಕದ ಹವಾಯಿ ದ್ವೀಪದಲ್ಲಿರೋ ಜೀವಂತ ಜ್ವಾಲಾಮುಖಿ ಮೌನ್‌ಲೋವಾ ಸ್ಫೋಟಗೊಂಡಿದೆ. ಪರ್ವತದಿಂದ ಸುಮಾರು 200 ಫೀಟ್‌ ಅಂದ್ರೆ 60 ಮೀಟರ್‌ ಎತ್ತರದವರೆಗೆ ಜ್ವಾಲಾಮುಖಿಯ ಲಾವಾರಸ ಚಿಮ್ಮಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇದು ಅತ್ಯಂತ ದೊಡ್ಡ ಜ್ವಾಲಾಮುಖಿಯಾಗಿದ್ದು 39 ವರ್ಷಗಳ ನಂತರ ಸ್ಫೋಟಗೊಂಡಿದೆ. ಹಾಗೂ ಇದ್ರಿಂದ ಹವಾಯಿ ದ್ವೀಪದ ಅರ್ಧದಷ್ಟು ಭಾಗ, ಭಾರಿ ಪ್ರಾಮಾಣದ ಹೊಗೆ ಮತ್ತು ಧೂಳಿನಿಂದ ಆವರಸಿಕೊಂಡಿದೆ. ಅಂದ್ಹಾಗೆ ಸದ್ಯಕ್ಕೆ ಈ ಜ್ವಾಲಾಮುಖಿ ಸ್ಫೋಟದಿಂದ ಆಸ್ತಿ ಹಾಗೂ ಜನ ಜೀವನಕ್ಕೆ ಯಾವುದೇ ತೊಂದ್ರೆ ಇಲ್ಲ ಅಂದ್ರೂ ಎಚ್ಚರಿಕೆಯಿಂದ ಇರ್ಬೇಕು ಅಂತ ವಿಜ್ಞಾನಿಗಳು ಹೇಳಿದ್ದಾರೆ. ಕೊನೆಯ ಬಾರಿ 1984ರಲ್ಲಿ ಈ ಜ್ವಾಲಾಮುಖಿ ಸ್ಫೋಟಗೊಂಡಿತ್ತು.

-masthmagaa.com

Contact Us for Advertisement

Leave a Reply