ವಾರದ ಬಳಿಕ ಮತ್ತೆ ಭಾರತೀಯನ್ನ ಬಾಯ್ತುಂಬ ಹೊಗಳಿದ ಪುಟಿನ್‌! ಏನಂದ್ರು ಗೊತ್ತಾ?

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತವನ್ನ ಹಾಗೂ ಭಾರತೀಯರನ್ನ ಮತ್ತೆ ದೊಡ್ಡ ದನಿಯಲ್ಲಿ ಹೊಗಳಿದ್ದಾರೆ. ಕಳೆದ ವಾರವಷ್ಟೇ ಮೋದಿಯನ್ನ, ಅವರ ನಾಯಕತ್ವವನ್ನ ಕೊಂಡಾಡಿದ್ದ ಪುಟಿನ್‌, ಇದೀಗ ಭಾರತೀಯರ ಪರ ಬಿಗ್‌ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಭಾರತೀಯರು ಟ್ಯಾಲೆಂಟೆಡ್‌ ಜನ. ಭಾರತೀಯರು ಛಲ ಇರೋರು, ಭಾರತ ಅಭಿವೃದ್ಧಿಯ ವಿಷಯದಲ್ಲಿ ಔಟ್‌ಸ್ಟ್ಯಾಂಡಿಂಗ್ ರಿಸಲ್ಟ್‌ ಅಥವಾ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತೆ. ಇದರ ಬಗ್ಗೆ ಯಾವುದೇ ಡೌಟ್‌ಬೇಡ. ಅವರ ಕೈಯಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯ ಇದೆ ಅಂತ ಹೇಳಿದ್ದಾರೆ. ಅಂದಹಾಗೆ ಕಳೆದ ವಾರವಷ್ಟೇ ಮೋದಿ ಬಗ್ಗೆ ಮಾತನಾಡಿದ್ದ ಪುಟಿನ್‌, ಮೋದಿ ಒಬ್ಬ ಅತ್ಯುತ್ತಮ ನಾಯಕ.‌ ಅವರು ಒಬ್ಬ ದೇಶಭಕ್ತ ಅಂತೆಲ್ಲಾ ಹೇಳಿದ್ರು. ಇದಾದ ಒಂದೇ ವಾರಕ್ಕೆ ಭಾರತೀಯರ ಬಗ್ಗೆ ಕೂಡ ಮಾತನಾಡಿದ್ದಾರೆ. ಇದೇ ವೇಳೆ ಆಫ್ರಿಕಾ ದೇಶಗಳ ಪರವಾಗಿ ಮಾತನಾಡುತ್ತಾ, ಪಾಶ್ಚಿಮಾತ್ಯ ದೇಶಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಆಫ್ರಿಕಾ ದೇಶಗಳ ಪರವಾಗಿ ನಿಲ್ತೀವಿ. ಪಾಶ್ಚಿಮಾತ್ಯ ಯುರೋಪ್‌ ದೇಶಗಳು ಇಲ್ಲಿರೋ ಜನರನ್ನ ಅವರ ಸಂಸ್ಕೃತಿಯನ್ನ ಗುಲಾಮಗಿರಿಗೆ ದೂಡಿದ್ರು. ಅದನ್ನ ಕೂಡ ಅವರು ಮರೀಬಾರ್ದು ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply