ಪಂಚಮಸಾಲಿ ಮೀಸಲಾತಿ ತಡೆ ಆದೇಶ ತೆರವು ಮಾಡಿದ ಹೈ ಕೋರ್ಟ್‌! ಬೊಮ್ಮಾಯಿ ಸರ್ಕಾರಕ್ಕೆ ಬಿಗ್‌ ರಿಲೀಫ್!

masthmagaa.com:

ಲಿಂಗಾಯತ ಸಮುದಾಯಕ್ಕೆ ನೀಡಿದ ಮೀಸಲಾತಿಗೆ ಸಂಬಂಧಪಟ್ಟಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿದ್ದ ಆದೇಶವನ್ನ ಹೈ ಕೋರ್ಟ್‌ ತೆರವುಗೊಳಿಸಿದೆ. ಕಳೆದ ಕೆಲವಾರಗಳ ಹಿಂದೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ 2C ಅಡಿಯಲ್ಲಿ ಮೀಸಲಾತಿ ನೀಡೋದಾಗಿ ಹೇಳಿತ್ತು. ಅದನ್ನ ವಿರೋಧಿಸಿ ವ್ಯಕ್ತಿಯೊಬ್ರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ರು. ಮೀಸಲಾತಿ ನೀಡುವುದರಿಂದ 2ಎ ಅಡಿಯಲ್ಲಿ ಬರುವ ಇತರೆ ಸಮುದಾಯಗಳಿಗೆ ಅನ್ಯಾಯ ಆಗುತ್ತೆ ಅಂತ ದೂರಲಾಗಿತ್ತು. ಹೀಗಾಗಿ ಕೋರ್ಟ್ ಮೀಸಲಾತಿಗೆ ಮಧ್ಯಂತರ ತಡೆ ನೀಡಿತ್ತು. ಆದ್ರೆ ಸರ್ಕಾರದ ಪರ ವಕೀಲರು, 2ಎ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಆಗಲ್ಲ ಅಂತ ಹೇಳಿದ್ರು. ಹೀಗಾಗಿ ಈ ಆದೇಶವನ್ನ ತೆರವು ಮಾಡಲಾಗಿದೆ. ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ. ಇನ್ನು ನಾಳೆ ಅಂದ್ರೆ ಶುಕ್ರವಾರ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಅಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply