ಇನ್ಮುಂದೆ 18 ವರ್ಷದವರು ಸಾರಾಯಿ ಅಂಗಡಿಗೆ ರಾಜರೋಷವಾಗಿ ಹೋಗಬಹುದು? ಸರ್ಕಾರ ಸಿದ್ದಪಡಿಸಿದೆಯಾ ಹೊಸ ರೂಲ್ಸ್‌?

masthmagaa.com:

ಮದ್ಯಪಾನಕ್ಕಿದ್ದ ನಿಗದಿತ ವಯಸ್ಸನ್ನ 21ರಿಂದ 18 ಇಳಿಸೋಕೆ ರಾಜ್ಯ ಸರ್ಕಾರ ಮುಂದಾಗಿದೆ ಅನ್ನೋ ಮಾಹಿತಿ ಬರ್ತಾಯಿದೆ. 21 ವರ್ಷಕ್ಕಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಅನ್ನೋ ನಿಯಮವನ್ನ ಸಡಿಲಿಸಿ ವಯಸ್ಸಿನ ಮಿತಿಯನ್ನ 18 ವರ್ಷಕ್ಕೆ ಕಡಿಮೆ ಮಾಡೋದಕ್ಕೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆ ಸಿದ್ದಪಡಿಸಿರುವ ಕರಡು ಪ್ರತಿಯಲ್ಲಿ ಇದನ್ನ ಸೇರಿಸಿದೆ ಅಂತ ಹೇಳಲಾಗ್ತಿದೆ. ಒಂದ್ವೇಳೆ ಸರ್ಕಾರ ಇದಕ್ಕೆ ಒಪ್ಪಿಗೆ ಕೊಟ್ರೆ 18 ವರ್ಷದವರೂ ಸಹ ಯಾವುದೇ ಅಂಜಿಕೆ, ಅಳುಕು ಏನೂ ಇಲ್ಲದೇ ರಾಜರೋಷವಾಗಿ ಮದ್ಯ ಖರೀದಿಸಿ ಸೇವನೆ ಮಾಡೋದಕ್ಕೆ ಅವಕಾಶ ಸಿಗಲಿದೆ. ಇನ್ನು ಈ ಸುದ್ದಿ ಹೊರಬರ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಆಕ್ರೋಶ ಕೇಳಿ ಬರ್ತಿದ್ದು ಇದಕ್ಕೆಲ್ಲಾ ಸರ್ಕಾರದಿಂದ ಇದಕ್ಕೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

-masthmagaa.com

Contact Us for Advertisement

Leave a Reply