ಪಶ್ಚಿಮ ಬಂಗಾಳದಲ್ಲಿ ಸರಣಿ ಕೊಲೆ:TMC v/s CPI(M) ಕಾಳಗ

masthmagaa.com:

ಪಶ್ಚಿಮ ಬಂಗಾಳದಲ್ಲಿ TMC ಮತ್ತು CPI(M) ಕಾರ್ಯಕರ್ತರ ನಡುವೆ ಉದ್ವಿಗ್ನತೆ ಉಂಟಾಗಿದೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದ ಘರ್ಷಣೆಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ನಿನ್ನೆ TMC ಲೀಡರ್‌ ಒಬ್ರನ್ನ ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಮೃತ ವ್ಯಕ್ತಿಯನ್ನ ಸೈಫುದ್ದಿನ್‌ ಲಸ್ಕರ್‌ ಅಂತ ಗುರುತಿಸಲಾಗಿದ್ದು, ಅಲ್ಲಿನ ಜೋಯ್‌ನಗರದ ʼಬಾಮುಂಗಾಚಿʼ ಪ್ರದೇಶದ ಏರಿಯಾ ಪ್ರೆಸಿಡೆಂಟ್‌ ಆಗಿದ್ರು. ಅವರ ಹತ್ಯೆಯಾದ ಸ್ಥಳದಲ್ಲಿದ್ದ TMC ಕಾರ್ಯಕರ್ತರು ದಾಳಿಕೋರರನ್ನು ಹಿಡಿದು, ಅವರಲ್ಲೊಬ್ಬನನ್ನು ಥಳಿಸಿ ಕೊಂದಿದ್ದಾರೆ. ಜೊತೆಗೆ CPI(M) ಬೆಂಬಲಿಗರೇ ಲಸ್ಕರ್‌ ಹತ್ಯೆ ಮಾಡಿದ್ದಾರೆ ಅಂತ TMC ಆರೋಪಿಸಿದೆ. ಆದ್ರೆ ಈ ಹಿಂದೆ ಲಸ್ಕರ್‌ ಬೆಂಬಲಿಗರು ನಮ್ಮ ಮನೆಗಳನ್ನ ದ್ವಂಸ ಮಾಡಿ, ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ್ರು ಅಂತ CPI(M) ಕಾರ್ಯಕರ್ತರು ಪ್ರತ್ಯಾರೋಪ ಮಾಡಿದ್ದಾರೆ. ಹೀಗಾಗಿ ಇದೇ ಕಾರಣಕ್ಕೆ ಕೊಲೆ ನಡೆದಿರ್ಬೋದು ಅಂತ ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೊ CPI(M) ಕೇಂದ್ರ ಸಮಿತಿ ಸದಸ್ಯ ಸುಜನ್‌ ಚಕ್ರವರ್ತಿ ಲಸ್ಕರ್‌ ಸಾವಿಗೆ TMCಯ ಆಂತರಿಕ ಸಂಘರ್ಷಗಳು ಕಾರಣ. ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಅಂದಿದ್ದಾರೆ.

-masthmagaa.com

Contact Us for Advertisement

Leave a Reply