ಬ್ರಿಟನ್​​ಗೆ ಭಾರತ ಮೂಲದ ಪ್ರಧಾನಿ!

masthmagaa.com:

2021ರ ಲಾಕ್​ಡೌನ್ ಟೈಮಲ್ಲಿ ಎಣ್ಣೆ ಪಾರ್ಟಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​ರನ್ನು ದಿನೇ ದಿನೇ ಆಳಕ್ಕೆ ತಳ್ಳುತ್ತಾ ಸಾಗ್ತಿದೆ. ಇತ್ತೀಚೆಗಷ್ಟೇ ಸಂಸತ್​ನಲ್ಲಿ ಬೋರಿಸ್ ಜಾನ್ಸನ್​​ ಈ ಮದ್ಯ ಪಾರ್ಟಿಗೆ ಕ್ಷಮೆಯಾಚಿಸಿದ್ರು. ನಾನು ಕೆಲಸದ ಸಲುವಾಗಿ 2020ರಲ್ಲಿ ಡೌನಿಂಗ್‌ ಸ್ಟ್ರೀಟ್‌ನಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದೆ. ಕ್ಷಮಿಸಿಬಿಡಿ ಅಂದಿದ್ರು. ಆದ್ರೀಗ ಆ ಪಾರ್ಟಿ ನಡೆದಿದ್ದು ಪ್ರಿನ್ಸ್ ಫಿಲಿಪ್​ ಅವರ ಅಂತ್ಯಕ್ರಿಯೆಗೂ ಕೆಲವೇ ಗಂಟೆ ಮುನ್ನ ಅಂತ ಗೊತ್ತಾಗಿದೆ. ಇದು ಮತ್ತಷ್ಟು ದೊಡ್ಡಮಟ್ಟದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗೋ ಎಲ್ಲಾ ಸಾಧ್ಯತೆ ಇದೆ. 2021ರ ಏಪ್ರಿಲ್​ ತಿಂಗಳಲ್ಲಿ ಅಂದ್ರೆ ಕೊರೋನಾ ಜಾಸ್ತಿ ಇದ್ದ ಸಂದರ್ಭದಲ್ಲಿ ಪ್ರಿನ್ಸ್ ಫಿಲಿಪ್ ಪ್ರಾಣ ಬಿಟ್ಟಿದ್ರು. )

ಇನ್ನು ಈ ಮದ್ಯ ಪಾರ್ಟಿ ಬೋರಿಸ್ ಜಾನ್ಸನ್ ಅವರ ಕುರ್ಚಿಯನ್ನೇ ಅಲುಗಾಡಿಸೋ ಎಲ್ಲಾ ಲಕ್ಷಣ ಕಾಣಿಸ್ತಿದೆ. ಯಾಕಂದ್ರೆ ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಅನ್ನೋ ಕೂಗು ಜೋರಾಗ್ತಿದೆ. ಬ್ರಿಟನ್​​ನ ವಿಪಕ್ಷದವರು ಮಾತ್ರವಲ್ಲದೇ ಅವರದ್ದೇ ಪಕ್ಷದ ಸಂಸದರು ಬೋರಿಸ್ ಜಾನ್ಸನ್ ರಾಜೀನಾಮೆ ನೀಡ್ಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ಈ ನಡುವೆ ಒಂದ್ವೇಳೆ ಬೋರಿಸ್ ಜಾನ್ಸನ್ ರಾಜೀನಾಮೆ ಕೊಟ್ರೆ ಮುಂದಿನ ಪ್ರಧಾನಿ ಯಾರಾಗ್ಬೋದು ಅಂತ ಕೂಡ ಬ್ರಿಟನ್ ಮಾಧ್ಯಮಗಳಲ್ಲಿ ಚರ್ಚೆ ಶುರುವಾಗಿದೆ. ಭಾರತದ ಉದ್ಯಮಿ ನಾರಾಯಣ್ ಮೂರ್ತಿಯ ಅಳಿಯ ಬ್ರಿಟನ್ ಹಣಕಾಸು ಸಚಿವ ಋಷಿ ಸುನಕ್​ ಪ್ರಧಾನಿಯಾಗ್ಬೋದು ಅಂತ ಹೇಳಲಾಗ್ತಿದೆ. ಇವರಲ್ಲದೆ ವಿದೇಶಾಂಗ ಸಚಿವ ಲಿಜ್​ ಟ್ರೂಸ್, ಕ್ಯಾಬಿನೆಟ್ ಸಚಿವ ಮೈಕಲ್ ಗೋವ್ ಮತ್ತು ಭಾರತ ಮೂಲದ ಗೃಹಸಚಿವೆ ಪ್ರೀತಿ ಪಟೇಲ್ ಕೂಡ ರೇಸ್​​ನಲ್ಲಿದ್ದಾರೆ ಅಂತ ಗೊತ್ತಾಗಿದೆ.

-masthmagaa.com

 

Contact Us for Advertisement

Leave a Reply