ಅಮೆರಿಕದ ಬೋಯಿಂಗ್ 737 ಮ್ಯಾಕ್ಸ್‌ ವಿಮಾನಗಳ ಬೋಲ್ಟ್‌ಗಳು ಸಡಿಲ!

masthmagaa.com:

ಜನವರಿ 5 ರಂದು ಅಮೆರಿಕದಲ್ಲಿ ಹಾರಾಟದ ವೇಳೆ ವಿಮಾನವೊಂದ್ರ ಡೋರ್‌ ಪ್ಯಾನೆಲ್‌ ಬಿದ್ದಿದ್ರಿಂದ ಬೋಯಿಂಗ್‌ 737 ಮ್ಯಾಕ್ಸ್‌ 9 ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಿತ್ತು. ಈ ಘಟನೆ ಬಳಿಕ ಯುನೈಟೈಡ್‌ ಏರ್‌ಲೈನ್ಸ್‌ ವಿಮಾನಗಳ ತಪಾಸಣೆಗೆ ಮುಂದಾಗಿದೆ. ತಪಾಸಣೆಯಲ್ಲಿ ಸುಮಾರು ಹತ್ತು ಬೋಯಿಂಗ್ 737 ಮ್ಯಾಕ್ಸ್‌‌ 9 ವಿಮಾನಗಳ ಬೋಲ್ಟ್‌ಗಳು ಲೂಸ್‌ ಆಗಿವೆ ಅಂತ ಗೊತ್ತಾಗಿದೆ. ಇದ್ರಿಂದ ವಿಮಾನಗಳ ತಯಾರಿಕಾ ಪ್ರಕ್ರಿಯೆ ಬಗ್ಗೆ ಕಳವಳ ವ್ಯಕ್ತವಾಗಿದೆ. ಇನ್ನು ಕಳೆದ ವರ್ಷ ಏರ್‌ ಇಂಡಿಯಾ ಕಳೆದ ವರ್ಷ 220 ಬೋಯಿಂಗ್‌ ವಿಮಾನಗಳ ಖರೀದಿಗೆ ಅಗ್ರೀಮೆಂಟ್‌ ಮಾಡಿಕೊಂಡಿತ್ತು. ಈ ಇನ್ಸಿಡೆಂಟ್‌ನಿಂದ ಈ ಒಪ್ಪಂದವೂ ಕುಂಟಿತವಾಗ್ಬೋದು ಅಂತ ವಿಶ್ಲೇಷಿಸಲಾಗ್ತಿದೆ.

-masthmagaa.com

Contact Us for Advertisement

Leave a Reply