masthmagaa.com:

ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯ ಪೆಟ್ಟಿನಿಂದ ತತ್ತರಿಸಿರುವ ಜನಸಾಮಾನ್ಯರ ಮೇಲೆ ಈಗ ಗ್ಯಾಸ್ ಸಿಲಿಂಡರ್ ಹೊರೆ ಬಿದ್ದಿದೆ. ಆಯಿಲ್​ ಮಾರ್ಕೆಟಿಂಗ್ ಕಂಪನಿಗಳು (OMCs) ಗೃಹೋಪಯೋಗಿ ಅಡುಗೆ ಅನಿಲದ ಬೆಲೆಯನ್ನ 25 ರೂಪಾಯಿ ಹೆಚ್ಚು ಮಾಡಿವೆ. ಬೆಂಗಳೂರಿನಲ್ಲೀಗ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 797 ರೂಪಾಯಿ ಆಗಿದೆ. ಫೆಬ್ರವರಿ ಒಂದೇ ತಿಂಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 3ನೇ ಬಾರಿ ಏರಿಕೆ ಕಂಡಿದೆ. ಫೆಬ್ರವರಿ 4ನೇ ತಾರೀಖು 25 ರೂಪಾಯಿ, ಫೆಬ್ರವರಿ 14ನೇ ತಾರೀಖು 50 ರೂಪಾಯಿ ಮತ್ತು ಈಗ 25 ರೂಪಾಯಿ ಏರಿಕೆಯಾಗಿದೆ. ಅಲ್ಲಿಗೆ ಒಂದೇ ತಿಂಗಳಲ್ಲಿ 100 ರೂಪಾಯಿ ಜಾಸ್ತಿ ಆದಂತಾಗಿದೆ. ಡಿಸೆಂಬರ್​ನಿಂದ 200 ರೂಪಾಯಿ ಜಾಸ್ತಿ ಆದಂತಾಗಿದೆ. LPG ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲದ ಉಪ ಉತ್ಪನ್ನ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿನೇದಿನೆ ಹಚ್ಚಾಗ್ತಿದೆ. ಇದರ ಪರಿಣಾಮ ಆಯಿಲ್​ ಮಾರ್ಕೆಟಿಂಗ್ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನ ಏರಿಸಿವೆ.

-masthmagaa.com

Contact Us for Advertisement

Leave a Reply