ಮಧ್ಯಪ್ರದೇಶದಲ್ಲಿ ಭಾರಿ ಅಗ್ನಿ ದುರಂತ! 8 ಸಾವು, 63 ಮಂದಿಗೆ ಗಾಯ!

masthmagaa.com:

ಮಧ್ಯಪ್ರದೇಶದ ಪಟಾಕಿ ಫ್ಯಾಕ್ಟರಿ ಒಂದ್ರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 8 ಮಂದಿ ಮೃತಪಟ್ಟು, ಸುಮಾರು 63 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಅಲ್ಲಿನ ಹಾರ್ದಾ ಜಿಲ್ಲೆಯ ಬೈರಾಗರ್‌ ಹಳ್ಳಿಯಲ್ಲಿ ಫೆಬ್ರುವರಿ 06 ರಂದು ಸಂಭವಿಸಿದೆ. ಇನ್ನು ಇಲ್ಲಿ ಉಂಟಾದ ಸ್ಪೋಟದ ತೀವ್ರತೆಗೆ ಸುತ್ತಮುತ್ತಲ ಪ್ರದೇಶದ 50ಕ್ಕೂ ಹೆಚ್ಚಿನ ಮನೆ, ಮಳಿಗೆಗಳು ಸುಟ್ಟು ಕರಕಲಾಗಿವೆ. ಅಂದ್ಹಾಗೆ ಈ ಫ್ಯಾಕ್ಟರಿ ಒಳಗಡೆ ದೊಡ್ಡ ಪ್ರಮಾಣದಲ್ಲಿ ಗನ್‌ಪೌಡರ್‌ ಇದ್ದ ಕಾರಣ, ಅಗ್ನಿ ದುರಂತ ಸಂಭವಿಸಿದೆ ಅಂತ ತಿಳಿದು ಬಂದಿದೆ. ಸದ್ಯ ರಕ್ಷಣಾ ಕಾರ್ಯಚರಣೆ ನಡೀತಿದ್ದು, ಇದಕ್ಕೆ ಕಾರಣರಾದವ್ರ ಮೇಲೆ ಸೂಕ್ತ ಕ್ರಮ ತೆಗೆದ್ಕೊಳ್ಳೋದಾಗಿ ಮಧ್ಯಪ್ರದೇಶದ ಸಚಿವ ಉದಯ್‌ ಪ್ರತಾಪ್‌ ಸಿಂಗ್‌ ಹೇಳಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವ್ರು, ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿ, ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಮತ್ತು ಗಾಯಗೊಂಡವರಿಗೆ 50 ಸಾವಿರ ಪರಿಹಾರ ಅನೌನ್ಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply