ಪಲ್ಟಿಯಾದ ಪಿಕ್‌ ಅಪ್‌ ವಾಹನ: 14 ಬಲಿ, 21ಜನರಿಗೆ ಗಾಯ!

masthmagaa.com:

ಪಿಕ್‌ ಅಪ್ ವಾಹನವೊಂದು ಕಂಟ್ರೋಲ್‌ ತಪ್ಪಿ ತಗ್ಗು ಗುಂಡಿಗೆ ಬಿದ್ದು ಪಲ್ಟಿ ಹೊಡೆದ ಪರಿಣಾಮ 14 ಜನ ಮೃತಪಟ್ಟಿರೊ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಗುರುವಾರ ನಸುಕಿನ ಜಾವ ಅಲ್ಲಿನ ದಿಂಡೊರಿಯಲ್ಲಿ ಈ ದುರಂತ ಸಂಭವಿಸಿದೆ. ವಾಹನದಲ್ಲಿದ್ದ ಜನ ಕಾರ್ಯಕ್ರಮವೊಂದನ್ನ ಮುಗಿಸಿ ಹಿಂತಿರುಗೊ ವೇಳೆ ಈ ಅಪಘಾತ ನಡೆದಿದೆ ಅಂತ ಗೊತ್ತಾಗಿದೆ. ಇನ್ನು ಘಟನೆಯಲ್ಲಿ 21 ಜನ ಗಾಯಗೊಂಡಿದ್ದು, ಅವ್ರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಗೆ ಕಳವಳ ವ್ಯಕ್ತ ಪಡಿಸಿದ ಮಧ್ಯ ಪ್ರದೇಶ ಸಿಎಂ ಮೋಹನ್‌ ಯಾದವ್‌ ಮೃತ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನಿಧಿ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply