ಫಿಲಿಫೈನ್ಸ್‌ನಲ್ಲಿ ಭೂಕಂಪಕ್ಕೆ ಆರು ಬಲಿ, 18ಕ್ಕೂ ಅಧಿಕ ಜನರಿಗೆ ಗಾಯ!

masthmagaa.com:

ದಕ್ಷಿಣ ಫಿಲಿಫೈನ್ಸ್‌ದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಸ್ಕೇಲ್‌ನಲ್ಲಿ 6.7 ತೀವ್ರತೆ ದಾಖಲಾಗಿದೆ. ಭೂಕಂಪದ ಪರಿಣಾಮವಾಗಿ ಕಡಲ ತೀರದ ಸೌತ್‌ ಕೊಟಾಬಾಟೊ ಪ್ರಾಂತ್ಯದ ಸ್ಯಾಂಟೋ ಸಿಟಿಯಲ್ಲಿ 3 ಜನ ಮೃತ ಪಟ್ಟಿದ್ದಾರೆ. 18ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಅಂದ್ಹಾಗೆ ಫಿಲಿಫೈನ್ಸ್‌ ಮೊದಲೇ ‘ರಿಂಗ್‌ ಆಫ್‌ ಫೈರ್‌’ ನಲ್ಲಿದ್ದು, ಜ್ವಾಲಾಮುಖಿ ಹಾಗೂ ಭೂಕಂಪ ಚಟುವಟಿಕೆಗಳು ಈ ಪ್ರದೇಶದಲ್ಲಿ ಸಾಮಾನ್ಯವಾಗಿವೆ.

-masthmagaa.com

Contact Us for Advertisement

Leave a Reply