ಕಾಂಗ್ರೆಸ್‌ಗೆ ಕೈ ಕೊಟ್ಟ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್‌ ಚಾವಣ್!

masthmagaa.com:

ಕಾಂಗ್ರೆಸ್‌ ಪಕ್ಷಕ್ಕೆ ಮಹಾರಾಷ್ಟ್ರ ಕಡೆಯಿಂದ ಮತ್ತೊಂದು ಹೊಡೆತ ಬಿದ್ದಿದೆ. ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಡ್ರ ಮಾಜಿ ಸಿಎಂ ಅಶೋಕ್‌ ಚಾವಣ್‌, ಸೋಮವಾರ ತಮ್ಮ ಶಾಸಕ ಸ್ಥಾನ ಹಾಗೂ ಕಾಂಗ್ರೆಸ್‌ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಅಲ್ಲದೆ ಚಾವಣ್ ಬಿಜೆಪಿಗೆ ಸೇರಲಿದ್ದಾರೆ ಅನ್ನೋ ವಿಚಾರ ಕೇಳಿ ಬಂದಿದೆ. ʻನಾನು ಜೀವನ ಪೂರ್ತಿ ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ. ಈಗ ಬೇರೆ ಆಪ್ಶನ್‌ಗಳನ್ನ ನೋಡ್ತಿದ್ದೇನೆ. ಮುಂದೆ ಏನು ಮಾಡ್ಬೇಕು ಅಂತ ಒಂದೆರಡು ದಿನಗಳಲ್ಲಿ ಡಿಸಿಶನ್‌ ತಗೋತೇನೆ ಅಂದಿದ್ದಾರೆ. ಇನ್ನು ಅಶೋಕ್‌ ಜೊತೆ ಇನ್ನೂ 10-12 ಎಂಎಲ್‌ಎಗಳು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಲಿದ್ದಾರೆ, ಚೌಹಾಣ್‌ಗೆ ಬಿಜೆಪಿ ರಾಜ್ಯಸಭಾ ಸೀಟ್‌ ಆಫರ್‌ ಮಾಡಲಿದೆ ಅಂತೇಳಲಾಗ್ತಿದೆ. ಚಾವಣ್‌ ರಾಜಿನಾಮೆ ನೀಡಿದ ಬೆನ್ನಲ್ಲೇ ಅವರ ಬೆಂಬಲಿತ ಮಾಜಿ MLC ಅಮರ್‌ನಾಥ್‌ ರಾಜುಕರ್‌ ಕೂಡ ಪಕ್ಷದ ಎಲ್ಲಾ ಪೋಸ್ಟ್‌ಗಳಿಗೂ ರಾಜಿನಾಮೆ ನೀಡಿದ್ದಾರೆ. ಜೊತೆಗೆ ಮುಂಬೈ ನಗರದ ಕೌನ್ಸಿಲರ್‌ ಹಾಗೂ ಜಿಲ್ಲಾಧ್ಯಕ್ಷರಾಗಿದ್ದ ಜಗದೀಶ್‌ ಅಮೀನ್‌ ಕೂಡ ಅದೇ ದಾರಿ ಹಿಡಿದಿದ್ದಾರೆ. ಅಂದ್ಹಾಗೆ 2008 ರಿಂದ 2010ರ ವರೆಗೆ ಮಹಾರಾಷ್ಟ್ರ ಸಿಎಂ ಆಗಿದ್ದ ಅಶೋಕ್‌ ಚಾವಣ್‌, ಆದರ್ಶ ಗೃಹ ಯೋಜನೆ ಸ್ಕ್ಯಾಮ್‌ನಿಂದಾಗಿ ಅಧಿಕಾರ ಕಳೆದುಕೊಂಡಿದ್ರು. ಇನ್ನು ಇತ್ತೀಚೆಗಷ್ಟೇ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್‌ ಲೀಡರ್‌ಗಳಾದ ಬಾಬಾ ಸಿದ್ದಿಖಿ ಹಾಗೂ ಮಿಲಿಂದ್‌ ದಿಯೋರಾ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ರು.

-masthmagaa.com

Contact Us for Advertisement

Leave a Reply