ಮುಂಬೈ: ಏಷ್ಯಾದ ಮೊದಲ ಪ್ರೈವೇಟ್‌ ಗಗನಯಾತ್ರಿ ತರಬೇತಿ ಸೆಂಟರ್‌!

masthmagaa.com:

ಆಸ್ಟ್ರೋಬೋರ್ನ್‌ ಏರೋಸ್ಪೇಸ್‌, ಮುಂಬೈ ಮೂಲದ ಕಂಪನಿ ಇದೀಗ ಏಷ್ಯಾದ ಮೊದಲ ಪ್ರೈವೇಟ್‌ ಆಸ್ಟ್ರೋನಾಟ್‌ ಟ್ರೈನಿಂಗ್‌ ಸೆಂಟರ್‌ ನಿರ್ಮಾಣಕ್ಕೆ ಮುಂದಾಗಿದೆ. ಗಗನಯಾತ್ರಿಗಳಿಗೆ ತರಬೇತಿ ನೀಡೋ ಈ ಹೊಸ ಯೋಜನೆಯ ಪ್ರಾರಂಭಕ್ಕೆ ನವಿ ಮುಂಬೈನಲ್ಲಿ 4 ಎಕರೆ ಲ್ಯಾಂಡ್‌ ಅಗತ್ಯವಿದೆ. ಆದ್ರಿಂದ ಈ ಕುರಿತು ಕಂಪನಿ, ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸ್ತಿದೆ ಎನ್ನಲಾಗಿದೆ. ಅಂದ್ಹಾಗೆ ಈ ಕಂಪನಿ ಭಾರತದ ಮೊಟ್ಟಮೊದಲ ಆರು ಸೀಟರ್‌ಗಳ ಸ್ಪೇಸ್‌ ಮಾಡ್ಯುಲ್‌ ಡೆವಲಪ್‌ ಕೂಡ ಮಾಡ್ತಿದೆ.

-masthmagaa.com

Contact Us for Advertisement

Leave a Reply