ವಿಯೆಟ್ನಾಂನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ!

masthmagaa.com:

ವಿಯೆಟ್ನಾಂ ಪ್ರವಾಸದಲ್ಲಿರೊ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅಲ್ಲಿನ ಹೊ ಚಿ ಮಿನ್‌ ನಗರದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನ ಅನಾವರಣಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಎಸ್‌. ಜೈಶಂಕರ್‌ ಅವರು, ʻಹಿಂಸೆ ಮತ್ತು ಸಂಘರ್ಷಗಳಿಂದ ತುಂಬಿರೋ ಈಗಿನ ಜಗತ್ತಲ್ಲಿ ಮಹಾತ್ಮ ಗಾಂಧಿಯವರಿಗೆ ಪ್ರಾಧಾನ್ಯವನ್ನ ನೀಡಿರೋದು ವಿಶೇಷವಾಗಿದೆ. ಇವರು ಕೇವಲ ರಾಜಕೀಯ ಸ್ಫೂರ್ತಿ ಮಾತ್ರವಲ್ಲದೆ, ರಾಜತಾಂತ್ರಿಕತೆಗೆ ಮೋಟಿವೇಟರ್‌ ಆಗಿದ್ದಾರೆ. ಸತ್ಯ, ಅಹಿಂಸೆ, ಸ್ವಾತಂತ್ರ್ಯಕ್ಕಾಗಿ ಇವರು ನೀಡಿದ ಕೊಡುಗೆಗೆ ವಿಶ್ವಸಂಸ್ಥೆ ಕೂಡ ಮಹಾತ್ಮ ಗಾಂಧಿಯವರ ಹುಟ್ಟುಹಬ್ಬವನ್ನ ಅಂತರಾಷ್ಟ್ರೀಯ ಅಹಿಂಸೆ ದಿನವನ್ನಾಗಿ ಘೋಷಿಸಿದೆ. ಮಹಾತ್ಮ ಗಾಂಧಿ ಕೇವಲ ಭಾರತವನ್ನ ಮಾತ್ರ ಒಗ್ಗೂಡಿಸಿಲ್ಲ. ಬೇರೆ ದೇಶಗಳು ಮತ್ತು ಅಲ್ಲಿನ ಜನರನ್ನ ಕೂಡ ತಮ್ಮ ಜೀವನ ಮೌಲ್ಯಗಳಿಂದ ಇನ್ಸ್‌ಪಾಯರ್‌ ಮಾಡಿದ್ದಾರೆ. ಇಂದು ವಿಯೆಟ್ನಾಂನಲ್ಲಿ ನಡೆದ ಮಹಾತ್ಮ ಗಾಂಧಿಯವರ ಪ್ರತಿಮೆ ಅನಾವರಣ, ಭಾರತ-ವಿಯೆಟ್ನಾಂ ನಡುವೆಯ ಸ್ನೇಹ ಸಂಕೇತವಾಗಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply