ಗಾಂಧೀಜಿ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ!

masthmagaa.com:

ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗಳಿಗೆ ಸೌತ್ ಆಫ್ರಿಕಾದಲ್ಲಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 62 ಲಕ್ಷ ರ್ಯಾಂಡ್​ ವಂಚನೆ ಮತ್ತು ಫೋರ್ಜರಿ ಕೇಸಲ್ಲಿ ಡರ್ಬನ್ ಕೋರ್ಟ್​ ಈ ತೀರ್ಪು ನೀಡಿದೆ. ರ್ಯಾಂಡ್ ಅಂದ್ರೆ ಸೌತ್ ಆಫ್ರಿಕಾದ ಕರೆನ್ಸಿಯ ಹೆಸರು. 56 ವರ್ಷದ ಆಶಿಶ್ ಲತಾ ರಾಮ್​ಗೋಬಿನ್​​ ಶಿಕ್ಷೆಗೆ ಒಳಗಾಗಿರೋ ಗಾಂಧೀಜಿ ಮೊಮ್ಮಗಳು. ಇವರು ಬ್ಯುಸಿನೆಸ್​​ಮನ್​​ ಎಸ್​ಆರ್ ಮಹಾರಾಜ್ ಅವರಿಗೆ 62 ಲಕ್ಷ ರ್ಯಾಂಡ್ ವಂಚಿಸಿದ್ಧಾರೆ ಅನ್ನೋದು ಆರೋಪ. 2015ರಿಂದಲೂ ಕೇಸ್ ನಡೀತಾ ಇದ್ದು, ಲತಾ ಮಾತ್ರ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ರು. ಅಂದಹಾಗೆ ಈ ಲತಾ ರಾಮ್​​ಗೋಬಿನ್,​​ ಗಾಂಧೀಜಿ ಮೊಮ್ಮಗಳು, ಸಾಮಾಜಿಕ ಹಕ್ಕು ಹೋರಾಟಗಾರ್ತಿ ಎಲಾ ಗಾಂಧಿ ಮೊಮ್ಮಗಳು.

-masthmagaa.com

Contact Us for Advertisement

Leave a Reply